Loading..

ಅತ್ಯಾಚಾರಿ ಪ್ರಜ್ವಲ್ ರೇವಣ್ಣನಿಗೆ ಜೀವಾವಧಿ ಶಿಕ್ಷೆ- ಹೋರಾಟಕ್ಕೆ ಸಂದ ಜಯ

ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಅತ್ಯಾಚಾರದ ಒಂದು ಪ್ರಕರಣಕ್ಕೆ ಸುತ್ತುವರಿದಂತೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ಸ್ವಾಗತಿಸುತ್ತದೆ.
ಅತ್ಯಂತ ನೀಚ ಮತ್ತು ವಿಕೃತವಾಗಿ ನಡೆದುಕೊಂಡ ಪ್ರಜ್ವಲ್‌ನ ಲೈಂಗಿಕ ದೌರ್ಜನ್ಯಗಳ ವಿರುದ್ಧ ರಾಜ್ಯದಾದ್ಯಂತ ಮಹಿಳೆಯರು, ಪ್ರಜ್ಞಾವಂತ ಜನತೆ ಹೋರಾಟ ನಡೆಸಿದ ಕಾರಣದಿಂದ ವಿಶೇಷ ತನಿಖಾ ದಳ ರಚನೆಯಾಗಿ ಅದರ ಮೂಲಕ ಈ ತೀರ್ಪಿಗೆ ಕಾರಣವಾಗಿದೆ. ಇಂತಹ ಹೋರಾಟದಲ್ಲಿ ಪಾಲ್ಗೊಂಡ ಜನತೆಗೆ ಎಸ್‌ಯುಸಿಐ(ಸಿ) ಅಭಿನಂದನೆ ಸಲ್ಲಿಸುತ್ತದೆ.

ಆತನ ವಿಕೃತಿಗೆ ಬಲಿಯಾದ ಇತರ ಹೆಣ್ಣು ಮಕ್ಕಳು ಕೂಡ ದಿಟ್ಟವಾಗಿ ದೂರು ದಾಖಲಿಸಿ, ಕಾನೂನಿನ ಕುಣಿಕೆಗೆ ಸಿಕ್ಕುವಂತೆ ಮಾಡಬೇಕೆಂದು ನಾವು ಕಾಳಜಿಯೊಂದಿಗೆ ಮನವಿ ಮಾಡುತ್ತೇವೆ. ಜೊತೆಗೆ ತನ್ನ ಕೌಟುಂಬಿಕ ಪ್ರಭಾವದ ಮೂಲಕ ಮೇಲಿನ ನ್ಯಾಯಾಲಯಗಳಲ್ಲಿ ಶಿಕ್ಷೆಯನ್ನು ಕಡಿತ ಮಾಡಿಸುವ ಅಥವಾ ಜಾಮೀನು ಪಡೆಯುವ ಸಾಧ್ಯತೆ ಇರುವ ಕಾರಣ, ಜನತೆ ಇದರ ಬಗ್ಗೆ ಎಚ್ಚರ ವಹಿಸಬೇಕು ಮತ್ತು ತನಿಖಾ ದಳ ಹಾಗೂ ರಾಜ್ಯ ಸರ್ಕಾರ ಈ ಶಿಕ್ಷೆ ಸಮರ್ಪಕವಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು, ಜೀವವಿರೋಧಿ ವಿಕೃತ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ, ನಾಗರಿಕ ಸಮಾಜದಲ್ಲಿ ಅವರಿಗೆ ಅವಕಾಶ ಇಲ್ಲ ಎಂಬ ಸಂದೇಶ ನೀಡಬೇಕು ಎಂದು ಎಸ್‌ಯುಸಿಐ(ಸಿ) ಒತ್ತಾಯಿಸುತ್ತದೆ.

ಹೇಳಿಕೆ ಇವರಿಂದ
ಕೆ.ಉಮಾ
ರಾಜ್ಯ ಕಾರ್ಯದರ್ಶಿಗಳು, ಎಸ್‌ಯುಸಿಐ(ಸಿ)
03.08.2025