
ಇಸ್ರೇಲ್-ಇರಾನ್ ಕದನ ವಿರಾಮ ಘೋಷಿಸಲು ಯುದ್ಧ-ವಿರೋಧಿ ಪ್ರತಿಭಟನೆಗಳಿಂದ ಒತ್ತಡಕ್ಕೊಳಗಾದ ಟ್ರಂಪ್ - ಎಸ್ಯುಸಿಐ(ಕಮ್ಯುನಿಸ್ಟ್)
ಎಸ್ಯುಸಿಐ(ಸಿ) ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರವಾಶ್ ಘೋಷ್ ಅವರ ಹೇಳಿಕೆ:
“ಅಮೆರಿಕಾ ಮತ್ತು ಇಸ್ರೇಲ್ ಸೇರಿದಂತೆ ಪ್ರಪಂಚದಾದ್ಯಂತ ಶಾಂತಿಪ್ರಿಯ ಜನರ ಯುದ್ಧ-ವಿರೋಧಿ ಪ್ರತಿಭಟನೆಗಳಿಂದ ಒತ್ತಡಕ್ಕೆ ಒಳಗಾಗಿ, ಅಮೆರಿಕಾದ ಅಧ್ಯಕ್ಷ ಟ್ರಂಪ್ ಹಿಮ್ಮೆಟ್ಟಬೇಕಾಯಿತು ಮತ್ತು 12 ದಿನಗಳ ಯುದ್ಧಕ್ಕೆ ಇರಾನ್ ಮತ್ತು ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಸ್ವಯಂಪ್ರೇರಿತವಾಗಿ ಘೋಷಿಸಬೇಕಾಯಿತು. ಇದು ಜಾಗತಿಕ ಯುದ್ಧ-ವಿರೋಧಿ ಶಾಂತಿ ಚಳುವಳಿ ಮತ್ತು ತಮ್ಮ ತಾಯ್ನಾಡಿನ ಸಾರ್ವಭೌಮತ್ವವನ್ನು ರಕ್ಷಿಸಲು ಧೈರ್ಯಶಾಲಿ ಇರಾನಿನ ಜನರ ದೃಢ ಸಂಕಲ್ಪದ ವಿಜಯವಾಗಿದೆ.
ಸಾಮ್ರಾಜ್ಯಶಾಹಿ ಶಕ್ತಿಗಳಿಂದ ಇಂತಹ ಆಕ್ರಮಣಕಾರಿ ಯುದ್ಧ ಮರುಕಳಿಸದಂತೆ ಅಮೆರಿಕಾ ಮತ್ತು ಇಸ್ರೇಲ್ನ ನಾಗರಿಕರು ಸೇರಿದಂತೆ ವಿಶ್ವದ ಜನರು ಜಾಗರೂಕರಾಗಿರಬೇಕು, ತಮ್ಮ ಯುದ್ಧ-ವಿರೋಧಿ ನಿಲುವಿನ ಒತ್ತಡವನ್ನು ಕಾಯ್ದುಕೊಳ್ಳಬೇಕು ಮತ್ತು ಸಾಮ್ರಾಜ್ಯವಾದ ಅಸ್ತಿತ್ವದಲ್ಲಿರುವವರೆಗೂ ಅದು ಯುದ್ಧವನ್ನು ಹುಟ್ಟುಹಾಕುವುದನ್ನು ಮುಂದುವರಿಸುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.”