Loading..

ಮದ್ದೂರು ಹಿಂಸಾಚಾರ: ಎಸ್‌ಯುಸಿಐ(ಸಿ) ಖಂಡನೆ


ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಇತ್ತೀಚೆಗೆ ನಡೆದ ಕಲ್ಲು ತೂರಾಟ ಮತ್ತು ಹಿಂಸಾಚಾರದ ಬಗ್ಗೆ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಕೆ.ಉಮಾ ಆತಂಕ ವ್ಯಕ್ತಪಡಿಸಿದ್ದಾರೆ.

ತಮ್ಮ ಹೇಳಿಕೆಯಲ್ಲಿ ಅವರು ,
“ಮದ್ದೂರಿನ ಗಲಭೆಗೆ ಕಾರಣರಾದವರನ್ನು ಪತ್ತೆಹಚ್ಚಿ, ಅವರಿಗೆ ನಿಷ್ಪಕ್ಷಪಾತವಾಗಿ ಕಠಿಣ ಶಿಕ್ಷೆ ನೀಡಬೇಕು, ಸಾಮಾನ್ಯ ಜನತೆ ದ್ವೇಷದ ಪ್ರಚಾರಕ್ಕೆ ಬಲಿಯಾಗದೆ ತಮ್ಮ ಕೋಮು ಸಾಮರಸ್ಯ ಹಾಗೂ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಮತ್ತು ಇಂತಹ ಘಟನೆಗಳ ರಾಜಕೀಯ ದುರ್ಲಾಭ ಪಡೆಯಲು ರಾಜಕೀಯ ಪಕ್ಷ ಮತ್ತು ಸಂಘಟನೆಗಳಿಗೆ ಯಾವುದೇ ಅವಕಾಶವನ್ನು ಜಿಲ್ಲಾಡಳಿತ ನೀಡಬಾರದು ಎಂದು ಎಸ್‌ಯುಸಿಐ(ಸಿ) ಒತ್ತಾಯಿಸುತ್ತದೆ ” ಎಂದು ಅವರು ತಿಳಿಸಿದ್ದಾರೆ.

ಸುದ್ದಿ ಇವರಿಂದ,

ಬಿ.ರವಿ
ರಾಜ್ಯ ಕಚೇರಿ ಕಾರ್ಯದರ್ಶಿ
ಎಸ್‌ಯುಸಿಐ(ಸಿ)
10.09.2025