Loading..

ಹಿಟ್ಲರನ ಫ್ಯಾಸೀವಾದವನ್ನು ಸೋಲಿಸಿದ ವಿಜಯಕ್ಕೆ ಈಗ 80 ವರ್ಷ ಸೋವಿಯತ್ ಒಕ್ಕೂಟದ ವಿಜಯಕ್ಕೆ ಸ್ಟಾಲಿನ್‌ರ ಅಮೋಘ ನಾಯಕತ್ವವೇ ಕಾರಣ


ಭಾಗ-3

(1945ರ ಮೇ 2ರಂದು ಸೋವಿಯತ್ ಒಕ್ಕೂಟದ ಕೆಂಪು ಸೈನ್ಯವು ಜರ್ಮನಿಯ ರಾಜಧಾನಿ ಬರ್ಲಿನ್ ತಲುಪಿ, ಜರ್ಮನಿಯನ್ನು ನಾಜಿ಼ ಆಳ್ವಿಕೆಯಿಂದ ಮುಕ್ತಗೊಳಿಸಿತು. ಹಿಮ್ಮೆಟ್ಟುತ್ತಿದ್ದ ಜರ್ಮನ್ ಸೈನ್ಯವನ್ನು ಬೆನ್ನಟ್ಟಿಕೊಂಡು ಬಂದ ಕೆಂಪು ಸೈನ್ಯವು ಅಲ್ಲಿನ ಸಂಸತ್ ಭವನ ‘ರೀಚ್‌ಸ್ಟಾö್ಯಗ್’ನ್ನು ವಶಪಡಿಸಿಕೊಂಡು ಅದರ ಗೋಪುರದ ಮೇಲೆ ಕೆಂಬಾವುಟವನ್ನು ಹಾರಿಸಿತು. ಇದರೊಂದಿಗೆ, ಜರ್ಮನಿ-ಇಟಲಿ-ಜಪಾನ್‌ಗಳ ಫ್ಯಾಸಿಸ್ಟ್ ದುಷ್ಟಕೂಟವು ಮಣ್ಣಾದಂತಾಯಿತು. ೧೯೪೫ರ ಮೇ ೮ರಂದು ಜರ್ಮನಿಯಲ್ಲಿ ಅಧಿಕಾರದಲ್ಲಿದ್ದವರು ಬೇಷರತ್ತಾಗಿ ಕೆಂಪು ಸೈನ್ಯಕ್ಕೆ ಶರಣಾದರು. ೨೦೨೫ರ ಮೇ ೮ – ಈ ಅಮೋಘ ವಿಜಯದ ೮೦ನೇ ವಾರ್ಷಿಕೋತ್ಸವದ ದಿನ. ಇಡೀ ಲೇಖನದ ಮೊದಲ ಭಾಗವು ಕಾರ್ಮಿಕ ದೃಷ್ಟಿಕೋನದ ೨೦೨೫ರ ಜೂನ್ ಮಾಸಿಕದ ಸಂಚಿಕೆಯಲ್ಲಿ ಪ್ರಕಟವಾಗಿದೆ. ಭಾಗ ೧ರಲ್ಲಿ ಹಿಟ್ಲರ್ ಮತ್ತು ಫ್ಯಾಸೀವಾದದ ಉದಯದ ಹಿನ್ನೆಲೆಯನ್ನು ಚರ್ಚಿಸಲಾಗಿದೆ. ಲೇಖನದ ಎರಡನೇ ಭಾಗವು ಕಾರ್ಮಿಕ ದೃಷ್ಟಿಕೋನದ ೨೦೨೫ರ ಸೆಪ್ಟೆಂಬರ್ ಮಾಸಿಕದ ಸಂಚಿಕೆಯಲ್ಲಿ ಪ್ರಕಟವಾಗಿದೆ. ಭಾಗ ೨ರಲ್ಲಿ ಮಾನವಕುಲವನ್ನು ರಕ್ಷಿಸಿದ ಮಹಾನ್ ನಾಯಕ ಸ್ಟಾಲಿನ್‌ರ ಪಾತ್ರ, ಸ್ಟಾಲಿನ್‌ಗ್ರಾಡ್ ಘನಘೋರ ಕದನ ಮತ್ತು ನಾಜಿ಼ ಜರ್ಮನಿಯ ಪತನವನ್ನು ವಿವರಿಸಲಾಗಿದೆ.)
ಸೋವಿಯತ್ ಒಕ್ಕೂಟದ ವಿಜಯಕ್ಕೆ ಸ್ಟಾಲಿನ್‌ರ ಅಮೋಘ ನಾಯಕತ್ವವೇ ಕಾರಣ
ಫ್ಯಾಸೀವಾದಿ ಜರ್ಮನಿ ಮತ್ತು ಇಟಲಿಗಳ ಸಂಪೂರ್ಣ ಸೋಲು, ನಂತರ ಜಪಾನ್‌ನ ಶರಣಾಗತಿಯು ಸಾಧ್ಯವಾದದ್ದು ಸೋವಿಯತ್ ಜನರ ಧೈರ್ಯ, ಸ್ಥೆೈರ್ಯ, ದೃಢ ಪ್ರಯತ್ನಗಳಿಂದ ಮತ್ತು ೨ ಕೋಟಿಗೂ ಮೀರಿದ ಅಮೂಲ್ಯ ಜೀವಗಳ ತ್ಯಾಗದಿಂದ. “ಪಶ್ಚಿಮದಲ್ಲಿ ಜರ್ಮನಿ ಮತ್ತು ಪೂರ್ವದಲ್ಲಿ ಜಪಾನ್ – ಇವು ಎರಡನೇ ಮಹಾಯುದ್ಧವನ್ನು ಹರಿಬಿಟ್ಟ ಜಾಗತಿಕ ಫ್ಯಾಸೀವಾದದ ಎರಡು ಸಿಡಿ ಮದ್ದುಗಳು. ಮಾನವೀಯತೆ ಮತ್ತು ನಾಗರಿಕತೆಯನ್ನು ವಿನಾಶದ ಅಂಚಿಗೆ ತಂದವರು ಅವರು. ಫ್ಯಾಸೀವಾದದ ಜಾಗತಿಕ ಮೂಲ ನಾಶವಾಯಿತು. ತತ್ಪರಿಣಾಮವಾಗಿ, ಜರ್ಮನಿ ಶರಣಾಗಬೇಕಾಯಿತು. ಜರ್ಮನಿಯ ಪ್ರಮುಖ ಮಿತ್ರನಾದ ಜಪಾನ್ ಕೂಡ ಶರಣಾಗತಿಯ ಒಪ್ಪಂದಕ್ಕೆ ಸಹಿ ಹಾಕಬೇಕಾಯಿತು. ಇದು ಎರಡನೇ ವಿಶ್ವಯುದ್ಧದ ಅಂತ್ಯವನ್ನು ಸೂಚಿಸುತ್ತದೆ. ನಮ್ಮ ದೇಶಕ್ಕೆ ತನ್ನ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ಮತ್ತು ಜರ್ಮನ್ನರನ್ನು ನಮ್ಮ ಸೋವಿಯತ್ ಭೂಪ್ರದೇಶದ ಗಡಿಯಿಂದ ಹೊರದೂಡಲು ಕೆಂಪು ಸೈನ್ಯವು ಯಶಸ್ವಿಯಾಯಿತು ಎಂದರೆ ಅದಕ್ಕೆ ಕಾರಣ ಇಡೀ ದೇಶದ, ಎಲ್ಲಾ ಜನರಿಂದ ದೊರಕಿದ ಅಖಂಡ ಬೆಂಬಲ. ಕಳೆದು ಹೋದ ವರ್ಷದಲ್ಲಿ ಎಲ್ಲಾ ಸೋವಿಯತ್ ಜನರ ಅಂದರೆ ಕಾರ್ಮಿಕರ, ರೈತರ ಮತ್ತು ಬುದ್ಧಿಜೀವಿಗಳ ಮತ್ತು ನಮ್ಮ ಸರ್ಕಾರ ಮತ್ತು ಪಕ್ಷದ ಅಂಗಸಂಸ್ಥೆಗಳ ಎಲ್ಲ ಚಟುವಟಿಕೆಗಳ ಧ್ಯೇಯವಾಕ್ಯವೇ ‘ಎಲ್ಲವೂ ಯುದ್ಧಕ್ಕಾಗಿ!’ ಎಂದೇ ಆಗಿಹೋಗಿತ್ತು” ಎಂಬ ಸ್ಟಾಲಿನ್‌ರ ಉದ್ಗಾರದಲ್ಲಿ ಇದು ಅಡಕವಾಗಿದೆ.
೧೯೪೧ರ ಅಕ್ಟೋಬರ್‌ನಲ್ಲಿ ಮಾಸ್ಕೋ, ನಾಜಿ಼ ಸೈನ್ಯದ ದಾಳಿಗೆ ಸಿಲುಕಿದ್ದಾಗ ಮತ್ತು ಕೆಂಪು ಸೈನ್ಯ ಹಾಗೂ ಸೋವಿಯತ್ ಜನರು, ಭೀಕರ ನಾಜಿ಼ ಸಮರ ಯಂತ್ರದ ಕ್ಷಿಪ್ರದಾಳಿಗಳನ್ನು ಧೀರೋದಾತ್ತವಾಗಿ ಎದುರಿಸುತ್ತಿದ್ದಾಗ, ಬೋಲ್ಶೆವಿಕ್ ಪಕ್ಷದ ಕಾರ್ಯಕರ್ತರನ್ನು, ಕೆಂಪು ಸೈನ್ಯವನ್ನು ಮತ್ತು ಇಡೀ ಸೋವಿಯತ್ ಜನಸಮೂಹವನ್ನು ಹುರಿದುಂಬಿಸಿದವರು ಸ್ಟಾಲಿನ್. ಸೋವಿಯತ್ ಜನರು ಸ್ಟಾಲಿನ್‌ರ ನಾಯಕತ್ವದಲ್ಲಿ ಅಚಲ ವಿಶ್ವಾಸ ಹೊಂದಿದ್ದರು, ಮುಂದೆ ಸಾಗಲು ಬಲವನ್ನು ಪಡೆದರು. ಸ್ಟಾಲಿನ್‌ರು ತಮ್ಮಾಪ್ತರ ಒತ್ತಾಯವನ್ನೂ ಸಹ ಬದಿಗೊತ್ತಿ, ಭಯಾನಕ ಅಪಾಯವನ್ನು ಎದುರು ನೋಡುತ್ತಿದ್ದಾಗಲೂ ಸಹ ತಮ್ಮ ದೇಶಬಾಂಧವರೊಂದಿಗೆ ಕೊನೆಯವರೆಗೂ ಮಾಸ್ಕೋದಲ್ಲೇ ಉಳಿದುಕೊಂಡರು.
೧೯೪೧ರಲ್ಲಿ ಜರ್ಮನ್ ಪಡೆಗಳು ಎಲ್ಲಾ ದಿಕ್ಕುಗಳಿಂದಲೂ ಲೆನಿನ್‌ಗ್ರಾಡ್‌ನ್ನು ಸುತ್ತುವರಿದಾಗ, ಅದು ದೇಶದ ಮುಖ್ಯ ಭೂಭಾಗದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು. ಲೆನಿನ್‌ಗ್ರಾಡ್‌ನ್ನು ಭೂಮಾರ್ಗದಿಂದ ಪ್ರವೇಶಿಸಲು ಅಸಾಧ್ಯವಾಗಿದ್ದಾಗ, ಆ ನಗರವನ್ನು ಉಳಿಸಲು ಮಾರ್ಷಲ್ ಝುಕೋವ್‌ರನ್ನು ಸ್ಟಾಲಿನ್ ವಿಮಾನದಲ್ಲಿ ಕಳುಹಿಸಿದರು. ಸ್ಟಾಲಿನ್‌ರ ಕರೆಗೆ ಓಗೊಟ್ಟು ಸೇನೆ ಮಾತ್ರವಲ್ಲ, ಮಹಿಳೆಯರು ಪುರುಷರಾದಿಯಾಗಿ ಯುವಕರು, ವೃದ್ಧರು, ಮಕ್ಕಳು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳೂ ಸಹ ಲೆನಿನ್‌ಗ್ರಾಡ್ ಉಳಿವಿಗಾಗಿ ಯುದ್ಧದಲ್ಲಿ ಸೇರಲು ತಮ್ಮ ಕೈಗೆ ಸಿಕ್ಕಿದ್ದನ್ನು ಹಿಡಿದು ತಯಾರಾದರು. ನಡುರಾತ್ರಿಯ ಸುಮಾರಿಗೆ ಮಾರ್ಷಲ್ ಝುಕೋವ್‌ಗೆ ಸ್ಟಾಲಿನ್‌ರಿಂದ ಫೋನ್ ಕರೆ ಬಂತು. “ಲೆನಿನ್‌ಗ್ರಾಡ್‌ನ್ನು ಉಳಿಸಲು ಸಾಧ್ಯವೇ?” ಎಂದು ಕೇಳಿದರು ಸ್ಟಾಲಿನ್. ಝುಕೋವ್ ಉತ್ತರ ಸಕಾರಾತ್ಮಕವಾಗಿತ್ತು. “ಒಬ್ಬ ಕಮ್ಯುನಿಸ್ಟ್ ಆಗಿ ಉತ್ತರ ನೀಡಿ” ಎಂದು ಸ್ಟಾಲಿನ್ ಕೇಳಿದರು. ಆಗ, ಧೀರ ಕೆಂಪು ಸೇನೆ ಮತ್ತು ಸೋವಿಯತ್ ಜನರು, ಫ್ಯಾಸೀವಾದಿ ಪಡೆಗಳನ್ನು ಪರಾಭವ ಮಾಡುವ ಮೂಲಕ “ಹೌದು” ಎಂಬ ಉತ್ತರವನ್ನು ನೀಡಿದರು. ‘ಲೆನಿನ್‌ಗ್ರಾಡ್’ – ಆ ಹೆಸರೇ ಸೋವಿಯತ್ ಜನರ, ಪ್ರಪಂಚದಾದ್ಯಂತದ ಕಮ್ಯುನಿಸ್ಟರ ಮತ್ತು ಇಡೀ ಕಾರ್ಮಿಕ ವರ್ಗದ ಮನದಲ್ಲಿ ಭಾವನಾತ್ಮಕ ತಂತಿಯನ್ನು ಮೀಟುತ್ತದೆ! ಯುದ್ಧ ಕಾಲದ ಸ್ಟಾಲಿನ್‌ರ ಪಾತ್ರವನ್ನು ನೆನೆಯುತ್ತಾ ಝುಕೋವ್‌ರವರು, “ಸ್ಟಾಲಿನ್ ಯಾವಾಗ ಮಲಗುತ್ತಾರೆ ಅಥವಾ ವಿರಮಿಸುತ್ತಾರೆ ಎಂದು ಯಾರಿಗೂ ತಿಳಿದಿರಲಿಲ್ಲ. ಅವರು ೨-೩ ಗಂಟೆಗಳ ವಿಶ್ರಾಂತಿ ಪಡೆಯುತ್ತಿದ್ದರು. ಸ್ಟಾಲಿನ್ ಎಂದಿಗೂ ಒಬ್ಬಂಟಿಯಾಗಿ ತಾವೇ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಅವರು ಎಲ್ಲರೊಂದಿಗೆ ಸಮಾಲೋಚಿಸುತ್ತಿದ್ದರು, ಕೆಲವೊಮ್ಮೆ ತಾವೇ ನೇರವಾಗಿ ಯುದ್ಧಭೂಮಿಯಲ್ಲಿದ್ದ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದರು ಮತ್ತು ನಂತರ ಒಮ್ಮತದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅವರು ಸಲಹೆಗಳನ್ನು ಗಮನವಿಟ್ಟು ಆಲಿಸುತ್ತಿದ್ದರು, ಮಿಲಿಟರಿ ಪರಿಸ್ಥಿತಿಯ ಬಗ್ಗೆ ಅವರಿಗೆ ಆಳವಾದ ತಿಳುವಳಿಕೆ ಇತ್ತು. ಸ್ಟಾಲಿನ್‌ರ ಮರಣದ ನಂತರ, ಮಿಲಿಟರಿ ಮತ್ತು ಕಾರ್ಯತಂತ್ರದ ಸ್ವರೂಪದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಅವರು ತಾವೊಬ್ಬರೇ ವ್ಯಕ್ತಿಗತ ನಿರ್ಧಾರಗಳನ್ನು ತೆಗೆದುಕೊಂಡರು ಎಂಬ ಹಸೀ ಸುಳ್ಳು ಓಡಾಡಿತು. ಇದನ್ನು ನಾನು ಒಪ್ಪುವುದಿಲ್ಲ. ವಿಷಯದ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದ ಯಾರಾದರೂ ಸರಿಯೇ, ಅವರಿಗೆ ವರದಿ ಮಾಡಿದಾಗ, ಅವರು ಅದರೆಡೆ ಗಮನ ನೀಡುತ್ತಿದ್ದರು. ಅಂತಹ ವರದಿಗಳ ಆಧಾರದಲ್ಲಿ ಹಿಂದಿನ ನಿರ್ಧಾರಗಳನ್ನು ಬದಲಾಯಿಸಿದ ಹಲವಾರು ಸಂದರ್ಭಗಳಿಗೆ ಸ್ವತ: ನಾನೇ ಸಾಕ್ಷಿ” ಎಂದಿದ್ದಾರೆ. ಮುಂದುವರಿದು, “ಸ್ಟಾಲಿನ್ ತೀಕ್ಷ್ಣವಾದ ಪ್ರಶ್ನೆಗಳಿಗಾಗಲಿ ಅಥವಾ ಯಾರೊಂದಿಗಾದರೂ ವಾದಿಸುವುದಕ್ಕಾಗಲಿ ಆಕ್ಷೇಪಿಸುವಂತಹ ವ್ಯಕ್ತಿಯಾಗಿರಲಿಲ್ಲ ಎಂಬುದನ್ನು ಯುದ್ಧದ ಸಮಯದಲ್ಲಿ ನಾನು ಅರಿತುಕೊಂಡೆ. ಯಾರಾದರೂ ಇದಕ್ಕೆ ತದ್ವಿರುದ್ಧವಾಗಿ ಹೇಳಿದರೆ, ಅವರು ಮಹಾಸುಳ್ಳರು.” ಎಂದು ಹೇಳಿದ್ದಾರೆ.(ನೆನಪುಗಳು ಮತ್ತು ಪ್ರತಿಬಿಂಬಗಳು – ಝುಕೋವ್, ಸಂಪುಟ ೧)
ಕೆಂಪು ಸೈನ್ಯವು ಬರ್ಲಿನ್‌ಅನ್ನು ಕೈವಶಮಾಡಿಕೊಳ್ಳುವ ಮುನ್ನ, ತಾನು ಸಾಗುವ ದಾರಿಯಲ್ಲಿನ ಪೂರ್ವ ಯುರೋಪಿನ ದೇಶಗಳು ಸಮಾಜವಾದಿ ದೇಶಗಳಾಗಲು ಸಹಾಯ ಮಾಡುತ್ತಾ ಮುನ್ನಡೆಯಿತು. ತದನಂತರ, ಅಷ್ಟೊತ್ತಿಗಾಗಲೇ ಗಣನೀಯವಾಗಿ ದುರ್ಬಲಗೊಂಡಿದ್ದ ಜಪಾನ್‌ನ ಮೇಲೆ ಸಹ ಅಂತಿಮವಾಗಿ ದಾಳಿ ಮಾಡಲು ಮುಂದಾಯಿತು; ಆಗ, ಫ್ಯಾಸೀವಾದಿ ದುಷ್ಟಕೂಟವನ್ನು ಸೋಲಿಸಿದ ಶ್ರೇಯವು ಎಲ್ಲಿ ಸಂಪೂರ್ಣವಾಗಿ ಸೋವಿಯತ್‌ಗೆ ದಕ್ಕಿಬಿಡುತ್ತದೆಯೋ ಎಂಬ ಆತಂಕದಿಂದ, ಅಮೆರಿಕ, ೧೯೪೫ರ ಆಗಸ್ಟ್ ೬ ಮತ್ತು ೯ರಂದು ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಪರಮಾಣು ಬಾಂಬ್ ಹಾಕಿತು, ೨ ಲಕ್ಷಕ್ಕೂ ಹೆಚ್ಚು ಅಮಾಯಕ ಜಪಾನಿಯರನ್ನು ಕೊಂದಿತು. ಆದರೆ, ಅದರಿಂದ ಹಿಟ್ಲರನ ಫ್ಯಾಸೀವಾದಕ್ಕೆ ಭಾರಿ ಸೋಲುಣಿಸಿದ ಧೀಮಂತ ಸ್ಟಾಲಿನ್‌ರ ಕೆಂಪು ಸೈನ್ಯದ ಘನತೆಯನ್ನು ಕುಗ್ಗಿಸಲು ಸಾಧ್ಯವಾಗಲಿಲ್ಲ.
ಸ್ಟಾಲಿನ್ ನಾಯಕತ್ವವನ್ನು ಕೊಂಡಾಡಿದ ಜಗತ್ತು
ಫ್ಯಾಸೀವಾದಿ ದುಷ್ಟಕೂಟವನ್ನು ನುಚ್ಚುನೂರು ಮಾಡಿದ ಸೋವಿಯತ್ ಒಕ್ಕೂಟದ ಈ ಮಹಾಗೌರವದ ವಿಜಯವು ವಿಶ್ವದೆಲ್ಲೆಡೆ ಸಮಾಜವಾದದ ಪ್ರತಿಷ್ಠೆ ಮತ್ತು ಮೆಚ್ಚುಗೆಯನ್ನು ಹೆಚ್ಚಿಸಿತು ಮತ್ತು ವಿಶ್ವ ಕಮ್ಯುನಿಸ್ಟ್ ಚಳುವಳಿಗೆ ಉತ್ತೇಜನ ನೀಡಿತು. ಸ್ಟಾಲಿನ್‌ರನ್ನು ಮತ್ತು ಸೋವಿಯತ್ ಜನತೆಯನ್ನು ಶ್ಲಾಘಿಸದ ಖ್ಯಾತವ್ಯಕ್ತಿಗಳೇ ಅಂದು ಇರಲಿಲ್ಲ. ರೋಮಾ ರೋಲಾ, “ಸುತ್ತಿಬಳಸಿ ಮಾತನಾಡುವ ಅಭ್ಯಾಸ ಅವರಿಗೆ ಇರಲಿಲ್ಲ…….ಹೊಗಳಿಕೆ ಮತ್ತು ಪ್ರಶಂಸೆಗೂ ಅವರಲ್ಲಿ ಸ್ಥಳವಿಲ್ಲ…….ಮಾನವ ಭಾವನೆಗಳಿಗೆ ಗೌರವ ನೀಡುವ ಮೂಲಕ…….ಮತ್ತು ಕಾರ್ಮಿಕ ವರ್ಗದ ಜನತಂತ್ರದ ನಿಜವಾದ ತಿಳುವಳಿಕೆಯನ್ನು ವಿಸ್ತರಿಸಲು ಸೋವಿಯತ್ ಒಕ್ಕೂಟವನ್ನು ಕಾರ್ಮಿಕವರ್ಗದ ಅಂತರರಾಷ್ಟ್ರೀಯವಾದದತ್ತ ಮುನ್ನಡೆಸುವ ಮೂಲಕ ರಷ್ಯಾ ಮತ್ತು ವಿಶ್ವದ ಜನರ ಕಥಾನಕದಲ್ಲಿ ಹೊಸದಾದ ಶ್ರೇಷ್ಠ ಯುಗವನ್ನು ಸ್ಟಾಲಿನ್ ಆರಂಭಿಸಿದಂತೆ ಕಾಣುತ್ತಾರೆ” ಎಂದು ದಾಖಲಿಸಿದರು. (ಮಾಸ್ಕೋ ಡೈರಿ)
ತಮ್ಮ ಬದುಕಿನ ಕೊನೆಯ ದಿನಗಳಲ್ಲಿ, ಹಾಸಿಗೆ ಹಿಡಿದು ಗಂಭೀರವಾಗಿ ಅಸ್ವಸ್ಥರಾಗಿದ್ದ ರವೀಂದ್ರನಾಥ ಠಾಕೂರ್, “ರಷ್ಯಾ ಜಯಿಸಿದರೆ ನನಗೆ ಮಹದಾನಂದವಾಗುತ್ತದೆ” ಎಂದರು. ದಿನವೂ ಮುಂಜಾನೆ ಅವರು ಯುದ್ಧದ ದೈನಂದಿನ ಸುದ್ದಿಗಾಗಿ ನಿರೀಕ್ಷೆಯೊಂದಿಗೆ ಕಾಯುತ್ತಿದ್ದರು. ಅಂದು ರಷ್ಯಾದ ಪರಿಸ್ಥಿತಿ ಕೆಟ್ಟದಾಗಿದ್ದರೆ, ಅವರ ಮುಖವು ಕಳೆಗುಂದುತ್ತಿತ್ತು ಮತ್ತು ಅವರು ಪತ್ರಿಕೆಯನ್ನು ಮೂಲೆಗೆ ಎಸೆದು ಬಿಡುತ್ತಿದ್ದರು. ತಮ್ಮ ಶಸ್ತ್ರಚಿಕಿತ್ಸೆಯ ದಿನ, ಕೇವಲ ಅರೆಗಂಟೆ ಮೊದಲು, “ನಾನು ಅವರೊಂದಿಗೆ ಈ ಕೊನೆಯ ಸಂಭಾಷಣೆ ನಡೆಸಿದೆ. ಅವರು, ರಷ್ಯಾದ ಸುದ್ದಿಯನ್ನು ಹೇಳಿ ಎಂದು ಕೇಳಿದರು. ನಾನು ಅವರಿಗೆ ರಷ್ಯಾದ ಸ್ಥಿತಿ ಸ್ವಲ್ಪ ಸುಧಾರಿಸಿದೆ, ಅವರು ಬಹುಶಃ ಜರ್ಮನ್ನರನ್ನು ಹಿಮ್ಮೆಟ್ಟಿಸುವ ಸಾಧ್ಯತೆ ಇದೆ ಎಂದೆ. ಅವರ ಮುಖಾರವಿಂದವು ಬೆಳಗಿತು ಮತ್ತು ಅವರು, “ಅದು ಖಂಡಿತವಾಗಿಯೂ ನಡೆಯುತ್ತದೆ, ಹಾಗೆ ಮಾಡಲು ಅವರಿಂದ ಮಾತ್ರ ಸಾಧ್ಯ, ಮತ್ತು ಅವರು ಯಶಸ್ವಿಯಾಗುತ್ತಾರೆ” ಎಂದು ಭರವಸೆಯೊಂದಿಗೆ ನುಡಿದರು” ಎಂದು ‘ಕಬಿಕಥಾ’ದಲ್ಲಿ ಪ್ರಶಾಂತ ಚಂದ್ರ ಮಹಲಾನೋಬಿಸ್ ನೆನೆಯುತ್ತಾರೆ. (ವಿಶ್ವಭಾರತಿ ಪತ್ರಿಕಾ, ೧೩೫೦ ಬಂಗಾಳಿ ವರ್ಷಗಳು)
ಮಹಾನ್ ಮಾನವತಾವಾದಿ ಕಲಾವಿದ ಚಾರ್ಲಿ ಚಾಪ್ಲಿನ್ ಎರಡನೇ ಮಹಾಯುದ್ಧದ ಸಮಯದಲ್ಲಿ, “ನಾನು ಕಮ್ಯುನಿಸ್ಟ್ ಅಲ್ಲ, ನಾನೊಬ್ಬ ಮನುಷ್ಯ ಮತ್ತು ನಾನು ಮಾನವರ ಪ್ರತಿಕ್ರಿಯೆಗಳನ್ನು ಬಲ್ಲೆ ಎಂದು ಭಾವಿಸುತ್ತೇನೆ. ಕಮ್ಯುನಿಸ್ಟರು ಇತರರಿಗಿಂತ ಭಿನ್ನರಲ್ಲ; ಅವರು ಕೈಯ್ಯೋ ಅಥವಾ ಕಾಲನ್ನೋ ಕಳೆದುಕೊಂಡರೆ, ನಮ್ಮೆಲ್ಲರಂತೆಯೇ ಅವರೂ ಸಹ ನೋವನ್ನು ಅನುಭವಿಸುತ್ತಾರೆ ಮತ್ತು ನಮ್ಮಂತೆ ಅವರೂ ಸಾಯುತ್ತಾರೆ, ಮತ್ತು ಕಮ್ಯುನಿಸ್ಟ್ ತಾಯಿಯೊಬ್ಬಳು ಇನ್ನಾವುದೇ ತಾಯಿಯಂತೆಯೇ ಇರುತ್ತಾಳೆ. ತನ್ನ ಮಕ್ಕಳು ವಾಪಸ್ಸು ಬರುವುದಿಲ್ಲ ಎಂಬ ದುರಂತದ ಸುದ್ದಿಯನ್ನು ಆಕೆ ಕೇಳಿದಾಗ, ಇತರೆಲ್ಲಾ ತಾಯಂದಿರಂತೆ ಆಕೆಯೂ ರೋದಿಸುತ್ತಾಳೆ. ಇದನ್ನು ಗ್ರಹಿಸಲು ನಾನೊಬ್ಬ ಕಮ್ಯುನಿಸ್ಟ್ನೇ ಆಗಬೇಕಾಗಿಲ್ಲ, ಮನುಷ್ಯನಾಗಿದ್ದರೆ ಸಾಕು ಮತ್ತು ಈ ಕ್ಷಣದಲ್ಲಿ ರಷ್ಯಾದ ತಾಯಂದಿರು ಬಹಳಷ್ಟು ರೋದಿಸುತ್ತಿದ್ದಾರೆ ಮತ್ತು ಅವರ ಬಹಳಷ್ಟು ಮಕ್ಕಳು ಸಾಯುತ್ತಿದ್ದಾರೆ. ಜನತಂತ್ರವು ಇಂದು ರಷ್ಯಾದ ಯುದ್ಧಭೂಮಿಗಳಲ್ಲಿ ಬದುಕುತ್ತದೆ ಅಥವಾ ಕೊನೆಯಾಗುತ್ತದೆ!” ಎಂದು ಬಹಳ ವೇದನೆಯಿಂದ ಬರೆದರು.(ನನ್ನ ಆತ್ಮಚರಿತ್ರೆ)
ಆಗ ಸೋವಿಯತ್ ಒಕ್ಕೂಟಕ್ಕೆ ಅಮೆರಿಕದ ರಾಯಭಾರಿಯಾಗಿದ್ದ ಜೋಸೆಫ್ ಡೇವಿಸ್, ಸ್ಟಾಲಿನ್‌ರೊಂದಿಗಿನ ಮಾತುಕತೆಯ ನಂತರ ಬಹಳವೇ ಪ್ರಭಾವಿತರಾಗಿ ತಮ್ಮ ಮಗಳಿಗೆ ಬರೆದ ಪತ್ರದಲ್ಲಿ ಅವರ ಬಗ್ಗೆ ಹೀಗೆ ಪ್ರತಿಕ್ರಿಯಿಸಿದರು: “ಅವರು ಶಾಂತ ಸ್ವಭಾವದ, ತೀಕ್ಷ್ಣಮತಿಯುಳ್ಳ ವ್ಯಕ್ತಿ ಎಂಬ ಅನಿಸಿಕೆ ಮೂಡಿಸುತ್ತಾರೆ. ಅವರ ಕಂದು ಕಣ್ಣುಗಳು ಸೌಮ್ಯವಾಗಿವೆ, ಅಲ್ಲಿ ದಯೆ ಇದೆ. ಮಗುವೊಂದು ಅವರ ತೊಡೆಯನ್ನೇರಿ ಕುಳಿತುಕೊಳ್ಳಲು ಇಷ್ಟ ಪಡುತ್ತದೆ…….ಅತ್ಯಂತ ಉಗ್ರ, ಸ್ಟಾಲಿನ್ ವಿರೋಧಿಯು ಕಲ್ಪಿಸಿಕೊಳ್ಳಬಹುದಾದ ವ್ಯಕ್ತಿತ್ವಕ್ಕೆ ನಿಖರವಾಗಿ ತದ್ವಿರುದ್ಧವಾದ ವ್ಯಕ್ತಿತ್ವವನ್ನು ನೀನೆೆÃನಾದರೂ ಚಿತ್ರಿಸಿಕೊಳ್ಳಲಾದರೆ, ಅದೇ ಈ ವ್ಯಕ್ತಿಯ ಚಿತ್ರಣ” ಎಂದು ಸ್ಟಾಲಿನ್‌ರನ್ನು ಕುರಿತು ವರ್ಣಿಸಿದ್ದರು. (ಮಿಷÀನ್ ಟು ಮಾಸ್ಕೋ)
“ಮೇ ೯ ರ ಫ್ಯಾಸೀವಾದದ ಮೇಲಿನ ವಿಜಯದ ದಿನವನ್ನು ಯೋಗ್ಯ ರೀತಿಯಲ್ಲಿ ನೆನಪಿಡಬೇಕು! ಸ್ವಾತಂತ್ರö್ಯವನ್ನು ಪ್ರೀತಿಸುವ ಯಾರೇ ಆದರೂ ಸರಿಯೇ, ಕೆಂಪು ಸೈನ್ಯಕ್ಕೆ ಎಂದೂ ಸಂದಾಯ ಮಾಡಲಾಗದಷ್ಟು ಅಗಾಧ ಋಣವನ್ನು ಹೊಂದಿದ್ದಾರೆ” – ಇದು ಸುಪ್ರಸಿದ್ಧ ಅಮೇರಿಕನ್ ಪತ್ರಕರ್ತ ಮತ್ತು ಬರಹಗಾರ ಅರ್ನೆಸ್ಟ್ ಹೆಮಿಂಗ್ವೇ ತೆಗೆದ ಉದ್ಗಾರ!
೧೯೪೫ ರ ಜೂನ್ ೨೨ ರಂದು ಮಾಸ್ಕೋದಲ್ಲಿ ನಡೆದ ವಿಜಯದ ಮೆರವಣಿಗೆಯಲ್ಲಿ ಸ್ಟಾಲಿನ್ ಗೌರವವಂದನೆ ಸ್ವೀಕರಿಸುತ್ತಾರೆ ಎಂದು ಪ್ರತಿಯೊಬ್ಬರೂ ನಿರೀಕ್ಷಿಸಿದ್ದರು. ಆದರೆ, ಮಾರ್ಷಲ್ ಝುಕೋವ್ ಗೌರವವಂದನೆ ಸ್ವೀಕರಿಸಬೇಕೆಂದು ಸ್ಟಾಲಿನ್ ಆದೇಶಿಸಿದರು. ಅಂದರೆ, ತಮಗೆ ನ್ಯಾಯಬದ್ಧವಾಗಿ ಸಿಗಬೇಕಾಗಿದ್ದ ಗೌರವವನ್ನು ತಮ್ಮ ಕೈಕೆಳಗಿನ ಝುಕೋವ್‌ರವರಿಗೆ ನೀಡಲು ಸ್ಟಾಲಿನ್ ಒಂದಿನಿತೂ ಹಿಂಜರಿಯಲಿಲ್ಲ. ಹಾಗಾಗಿ, ಆ ವಿಜಯೋತ್ಸವದ ಸನ್ಮಾನವನ್ನು ಮಾರ್ಷಲ್‌ಗಳಾದ ಝುಕೋವ್ ಮತ್ತು ಕೆ. ರೊಕೊಸ್ಸೊವ್ಸಿ÷್ಕ ಪಡೆದರು.
ಹಿಟ್ಲರ್ – ಮುಸೊಲಿನಿಯ ಅಂತ್ಯವಾಯಿತು. ಸರಿ, ಆದರೆ, ಫ್ಯಾಸೀವಾದ ಅಲ್ಲ!
ಹಿಟ್ಲರ್-ಮುಸೊಲಿನಿ-ಜಪಾನಿ ಫ್ಯಾಸೀವಾದಿ ದುಷ್ಟಕೂಟವು ಸೋತು ಸುಣ್ಣವಾಯಿತು, ಫ್ಯಾಸೀವಾದಿ ಯುದ್ಧ ಯಂತ್ರ ನುಚ್ಚು ನೂರಾಯಿತು. ಆದರೆ, ಫ್ಯಾಸೀವಾದವು ಸಂಪೂರ್ಣವಾಗಿ ನಾಶವಾಗಲಿಲ್ಲ. ನಮ್ಮ ಪಕ್ಷ ಎಸ್‌ಯುಸಿಐ(ಸಿ) ಸಂಸ್ಥಾಪಕರು ಮತ್ತು ಈ ಯುಗದ ಅಪ್ರತಿಮ ಮಾರ್ಕ್ಸ್ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್ ಹೇಳಿರುವÀಂತೆ, “……ಫ್ಯಾಸೀವಾದವು, ಐತಿಹಾಸಿಕವಾಗಿ ಹದಗೊಂಡಿರುವ ಪ್ರತಿಕ್ರಾಂತಿಯ ಸ್ವರೂಪವಾಗಿದೆ. ಈ ಮೂಲಕ ಬಂಡವಾಳವಾದವು ಮುಂಜಾಗ್ರತ ಕ್ರಮವಾಗಿ ಕ್ರಾಂತಿಯನ್ನು ತಡೆಯಲು ಪ್ರಯತ್ನಿಸುತ್ತದೆ. ಪ್ರಸ್ತುತ ವ್ಯವಸ್ಥೆಯ ವಿರುದ್ಧ ಜನರಲ್ಲಿ ಹೆಚ್ಚುತ್ತಿರುವ ಅತೃಪ್ತಿಯ ಸಮ್ಮುಖದಲ್ಲಿ ಬಿಕ್ಕಟ್ಟುಪೀಡಿತ, ಅವ್ಯವಸ್ಥೆ ಮತ್ತು ಅಪಕೀರ್ತಿಗೆ ಒಳಗಾಗಿರುವ ಬಂಡವಾಳಶಾಹಿ ವ್ಯವಸ್ಥೆಯನ್ನು ಪತನದಿಂದ ಕಾಪಾಡಲು ಫ್ಯಾಸೀವಾದವನ್ನು ವಿನ್ಯಾಸಗೊಳಿಸಲಾಗಿದೆ” ಮತ್ತು “ಅದರ ಗುರಿಯು, ಜನರ ಚಿಂತನೆಯನ್ನು ವೈಜ್ಞಾನಿಕ ಕಾರ್ಯ-ಕಾರಣ ಮಾರ್ಗದಿಂದ ದಿಕ್ಚುö್ಯತಿಗೊಳಿಸಿ ಕುರುಡು ನಂಬಿಕೆ, ಪೂರ್ವಗ್ರಹ ಮತ್ತು ಅಜ್ಞಾನದ ನಿಗೂಢವಾದಿ ಮಾರ್ಗಕ್ಕೆ ತಿರುಗಿಸಿ ಅಂತಿಮವಾಗಿ, ಸಾಮಾಜಿಕ ಉದ್ದೇಶದ ಬಗ್ಗೆಯೇ ತಿರಸ್ಕಾರವನ್ನು ಬೆಳೆಸುವುದಾಗಿದೆ…”
ಆದ್ದರಿಂದ, ಹಿಟ್ಲರನ ಫ್ಯಾಸೀವಾದದ ಸೋಲಿನ ೮೦ನೇ ವಾರ್ಷಿಕೋತ್ಸವವನ್ನು ಆಚರಿಸುವಾಗ, ನಾವು, ಇತಿಹಾಸದ ಬಗ್ಗೆ ತಿಳಿಯಬೇಕು. ಮಾರ್ಕ್ಸ್ವಾದಿ ದಿಗ್ಗಜರ ಅಮೂಲ್ಯ ಬೋಧನೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಸಾಮ್ರಾಜ್ಯಶಾಹಿ-ಬಂಡವಾಳಶಾಹಿಯನ್ನು ಕಿತ್ತೊಗೆಯಲು, ಫ್ಯಾಸೀವಾದವನ್ನು ಸೋಲಿಸಲು ಮತ್ತು ಸಮಾಜವಾದದತ್ತ ದಾರಿ ಸುಗಮಗೊಳಿಸಲು ಸರಿಯಾದ ಕ್ರಾಂತಿಕಾರಿ ನಾಯಕತ್ವದ ಅಡಿಯಲ್ಲಿ ವರ್ಗ ಮತ್ತು ಜನಸಮೂಹದ ಹೋರಾಟಗಳನ್ನು ತೀವ್ರಗೊಳಿಸಬೇಕು.