28-29, ಜನವರಿ, 2026: ಶ್ರೀಲಂಕಾ: ದಕ್ಷಿಣ ಏಷ್ಯಾ ಎಡಪಂಥೀಯ ವಿದ್ಯಾರ್ಥಿಗಳ ಯಶಸ್ವಿ ಸಮಾವೇಶ ಐಕ್ಯ ಹೋರಾಟದ ಸಂಕಲ್ಪ!
ಕಳೆದ ಜನವರಿ 28 ರಿಂದ 30 ರವರೆಗೆ ಶ್ರೀಲಂಕಾದ ಕೊಲೊಂಬೊದಲ್ಲಿ AIDSO ಮತ್ತು RSU ಜಂಟಿಯಾಗಿ ದಕ್ಷಿಣ ಏಷ್ಯಾ ವಿದ್ಯಾರ್ಥಿಗಳ ಸಮಾವೇಶವನ್ನು ಆಯೋಜಿಸಿದ್ದವು. ಬಾಂಗ್ಲಾದೇಶದ SSF, ನೇಪಾಳದ ANSU(S),ANNISU(R) ಮತ್ತು SSSUN ಪಾಕಿಸ್ತಾನದ NSF, ಶ್ರೀಲಂಕಾದ RSU ಹಾಗೂ ಭಾರತದ AIDSO ಮತ್ತು AISFಈ ಸಂಘಟನೆಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದವು.
ಎಐಡಿಎಸ್ಓ ಪರವಾಗಿ ಕಾಮ್ರೇಡರುಗಳಾದ ಮಣಿಶಂಕರ್ ಪಟ್ನಾಯಕ್ (ಅಂತರರಾಷ್ಟ್ರೀಯ ವ್ಯವಹಾರಗಳ ಕಾರ್ಯದರ್ಶಿ), ಅಜಯ್ ಕಾಮತ್ (ಜಂಟಿ ಕಾರ್ಯದರ್ಶಿ) ಮತ್ತು ಸುಗುಬಾಲ (ಕಾರ್ಯಕಾರಿ ಸಮಿತಿ ಸದಸ್ಯರು) ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಮಾವೇಶದ ಪ್ರಮುಖ ಗೋಷ್ಠಿಗಳು ಹೀಗಿದ್ದವು:
* ಭಾಗವಹಿಸಿದ ಸಂಘಟನೆಗಳ ಪರಿಚಯ
* ವಿವಿಧ ದೇಶಗಳ ರಾಜಕೀಯ ಮತ್ತು ಸಂಘಟನಾತ್ಮಕ ಅನುಭವಗಳ ಕುರಿತು ವಿಚಾರ ವಿನಿಮಯ ಸಂವಾದ
* “ಸಾಮ್ರಾಜ್ಯಶಾಹಿ ಆಡಳಿತದಲ್ಲಿ ಶಿಕ್ಷಣ – ಸವಾಲುಗಳು ಮತ್ತು ಪ್ರತಿರೋಧ” ಎಂಬ ವಿಷಯದ ಕುರಿತು ಸೆಮಿನಾರ್
ಇದರ ಮುಂದುವರಿದ ಭಾಗವಾಗಿ, ದಕ್ಷಿಣ ಏಷ್ಯಾ ವಲಯದಾದ್ಯಂತ ಭವಿಷ್ಯದ ಐಕ್ಯ ಹೋರಾಟದ ಹಾದಿಯನ್ನು ರೂಪಿಸಲು ಒಂದು ಘೋಷಣಾ ಪತ್ರವನ್ನು ಸಿದ್ಧಪಡಿಸಲಾಯಿತು. ಇದನ್ನು ‘ಕೊಲೊಂಬೊ ಘೋಷಣೆ’ (Colombo Declaration) ಎಂದು ಘೋಷಿಸಲಾಯಿತು.
ಈ ಘೋಷಣೆಯ ಪ್ರಮುಖ ಅಂಶಗಳು:
“ಶಿಕ್ಷಣಕ್ಕಾಗಿ ನಡೆಯುವ ಹೋರಾಟವು ಸಾಮ್ರಾಜ್ಯಶಾಹಿ-ಬಂಡವಾಳಶಾಹಿ ವಿರೋಧಿ ಹೋರಾಟ ಮತ್ತು ಮಾನವೀಯತೆಗಾಗಿನ ಹೋರಾಟದಿಂದ ಬೇರ್ಪಡಿಸಲಾಗದ್ದು. ಈ ಶಕ್ತಿಗಳನ್ನು ಸೋಲಿಸಲು ಮತ್ತು ಶೋಷಣೆಯಿಲ್ಲದ ಸಮಾಜಕ್ಕೆ ದಾರಿ ಮಾಡಿಕೊಡಲು ಒಗ್ಗಟ್ಟಿನ ಘೋಷಣೆಯಡಿ ಒಂದಾಗಬೇಕೆಂದು ನಾವು ದಕ್ಷಿಣ ಏಷ್ಯಾದ ವಿದ್ಯಾರ್ಥಿಗಳು ಮತ್ತು ತುಳಿತಕ್ಕೊಳಗಾದ ಜನಸಾಮಾನ್ಯರಿಗೆ ಕರೆ ನೀಡುತ್ತೇವೆ. ದಕ್ಷಿಣ ಏಷ್ಯಾದ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳಾದ ನಾವು ಶಿಕ್ಷಣ, ಮಾನವೀಯತೆ ಮತ್ತು ಮಾನವ ನಾಗರಿಕತೆಯನ್ನು ಉಳಿಸಲು ಉಗ್ರ ಹೋರಾಟವನ್ನು ರೂಪಿಸುತ್ತೇವೆ. ಈ ಹಿನ್ನೆಲೆಯಲ್ಲಿ, ಎಡಪಂಥೀಯ ವಿದ್ಯಾರ್ಥಿ ಚಳವಳಿಗಳ ಕುರಿತು ನಮ್ಮ ಚಿಂತನೆಗಳನ್ನು ಹಂಚಿಕೊಳ್ಳಲು ಮತ್ತು ಈ ಭಾಗದ ಪ್ರಗತಿಪರ ವಿದ್ಯಾರ್ಥಿ ಚಳವಳಿಗಳಿಗೆ ಬೆಂಬಲ ನೀಡಲು ನಾವು ಬಯಸುತ್ತೇವೆ. ಈ ಕೊಲೊಂಬೊ ಘೋಷಣೆಯು ಈ ನಿಟ್ಟಿನಲ್ಲಿ ಒಂದು ಆರಂಭವಾಗಿದೆ ಮತ್ತು ಇದು ಶೀಘ್ರದಲ್ಲೇ ಈ ವಲಯದ ಎಡ ಪಂಥೀಯ ವಿದ್ಯಾರ್ಥಿ ಚಳವಳಿಗಳ ವೇದಿಕೆಯಾಗಿ ರೂಪುಗೊಳ್ಳಲಿದೆ ಎಂಬ ಭರವಸೆ ನಮಗಿದೆ. ಈ ವೇದಿಕೆಯು ಈ ಭಾಗದ ನೈಜ ವಿದ್ಯಾರ್ಥಿ ಹೋರಾಟಗಳನ್ನು ಬೆಳೆಸುವ ಅಸ್ತ್ರವಾಗಲಿದೆ ಎಂದು ನಾವು ದೃಢವಾಗಿ ನಂಬುತ್ತೇವೆ.”
ವಿದ್ಯಾರ್ಥಿ ಒಗ್ಗಟ್ಟು ಚಿರಾಯುವಾಗಲಿ!
ಸಾಮ್ರಾಜ್ಯವಾದ ಅಳಿಯಲಿ! ಸಮಾಜವಾದ ಚಿರಾಯುವಾಗಲಿ!