ಮೈಸೂರು ಜಿಲ್ಲೆಯ ಸರಗೂರು, ಎಚ್.ಡಿ.ಕೋಟೆ ತಾಲೂಕುಗಳಲ್ಲಿ ಕಳೆದ 20 ದಿನಗಳಲ್ಲಿ ಹುಲಿ ದಾಳಿಗೆ 4 ಮಂದಿ ಬಲಿಯಾಗಿದ್ದಾರೆ.
ಮೈಸೂರು ಜಿಲ್ಲೆಯ ಸರಗೂರು, ಎಚ್.ಡಿ.ಕೋಟೆ ತಾಲೂಕುಗಳಲ್ಲಿ ಕಳೆದ 20 ದಿನಗಳಲ್ಲಿ ಹುಲಿ ದಾಳಿಗೆ 4 ಮಂದಿ ಬಲಿಯಾಗಿದ್ದಾರೆ. ದನಕರುಗಳು ಹುಲಿ, ಚಿರತೆಗಳಿಗೆ ಆಹಾರವಾಗಿವೆ. ಜನ ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ರೈತರು ರಾತ್ರಿಯ ಹೊತ್ತು ತಮ್ಮ ಹೊಲಗಳಿಗೆ ಕಾವಲು ಕಾಯಲು ಸಾಧ್ಯವಾಗದೆ, ಕೈಗೆ ಬಂದ ಬೆಳೆ ಕಾಡುಹಂದಿ, ಜಿಂಕೆಗಳ ಬಾಯಿಗೆ ತುತ್ತಾಗುತ್ತಿದೆ. ಅರಣ್ಯ ಇಲಾಖೆ ಮತ್ತು ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಸರಗೂರು ವಲಯ ಅರಣ್ಯ ಕಚೇರಿಗೆ ರೈತರು ಮತ್ತು ಆದಿವಾಸಿಗಳು 11.11.2025ರಂದು ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಧರಣಿ ನಡೆಸಿದರು. ಎಐಕೆಕೆಎಂಎಸ್ ಮೈಸೂರು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಗೆ ಎಐಕೆಕೆಎಂಎಸ್ ರಾಜ್ಯ ಅಧ್ಯಕ್ಷರಾದ ಎಂ. ಶಶಿಧರ್, ಉಪಾಧ್ಯಕ್ಷರಾದ ಎಚ್.ಪಿ.ಶಿವಪ್ರಕಾಶ್, ಮೈಸೂರು ಜಿಲ್ಲಾ ಅಧ್ಯಕ್ಷರಾದ ಬಸವರಾಜು, ಎಐಜೆಎಎಸ್‌ಸಿ ಸಂಚಾಲಕರಾದ ಸುನಿಲ್ ಟಿ.ಆರ್. ಮತ್ತಿತರ ನಾಯಕರು ಭಾಗವಹಿಸಿ ಮಾತನಾಡಿದರು. ಆರ್‌ಎಫ್‌ಓ ಶ್ರೀ ನಾರಾಯಣ್ ಅವರಿಗೆ ಮನವಿ ಸಲ್ಲಿಸಲಾಯಿತು.