ಕೆಂಪು ಕೋಟೆ ಬಳಿಯ ಸ್ಫೋಟದಲ್ಲಿ ಅಮಾಯಕ ನಾಗರಿಕರ ಸಾವಿಗೆ SUCI(C) ತೀವ್ರ ಆಘಾತ
ಪತ್ರಿಕಾ ಹೇಳಿಕೆ
ಕೆಂಪು ಕೋಟೆ ಬಳಿಯ ಸ್ಫೋಟದಲ್ಲಿ ಅಮಾಯಕ ನಾಗರಿಕರ ಸಾವಿಗೆ SUCI(C) ತೀವ್ರ ಆಘಾತ
SUCI (ಕಮ್ಯುನಿಸ್ಟ್) ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾ. ಪ್ರವಾಶ್ ಘೋಶ್ ಅವರು ಇಂದು ಈ ಕೆಳಗಿನ ಹೇಳಿಕೆಯನ್ನು ನೀಡಿದ್ದಾರೆ:
“ದೆಹಲಿಯ ಅತಿ ಹೆಚ್ಚು ಜನ ಸಂದಣಿ ಇರುವ ಮತ್ತು ಪ್ರವಾಸಿ ಆಕರ್ಷಣೆಯ ಪ್ರದೇಶವಾದ ಕೆಂಪು ಕೋಟೆ ಬಳಿ ನಡೆದ ಭಾರೀ ಸ್ಫೋಟದಿಂದಾಗಿ ಸುಮಾರು 10 ಅಮಾಯಕ ನಾಗರಿಕರು ಸಾವನ್ನಪ್ಪಿ, ಇನ್ನೂ ಅನೇಕರು ಗಂಭೀರವಾಗಿ ಗಾಯಗೊಂಡಿರುವುದು ನಮಗೆ ತೀವ್ರ ಆಘಾತವನ್ನುಂಟುಮಾಡಿದೆ.
ಇದು ವಿಧ್ವಂಸಕ ಕೃತ್ಯ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ತನ್ನ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ ಖಾತ್ರಿಪಡಿಸುವ ತನ್ನ ಪ್ರಮುಖ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳುವಂತಿಲ್ಲ ಎಂದು ನಾವು ಬಲವಾಗಿ ಭಾವಿಸುತ್ತೇವೆ.
ನಾಗರಿಕರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಸರ್ಕಾರವು ಹೆಚ್ಚು ಜಾಗರೂಕವಾಗಿರಬೇಕು ಮತ್ತು ಘಟನೆಯ ಬಗ್ಗೆ ಶೀಘ್ರವಾಗಿ ಸರಿಯಾದ ತನಿಖೆ ನಡೆಸಿ, ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.
ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಮತ್ತು ಗಾಯಗೊಂಡವರಿಗೆ ಸರ್ಕಾರಿ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಬೇಕೆಂದೂ ನಾವು ಆಗ್ರಹಿಸುತ್ತೇವೆ.”
11.11.2025