Loading..

ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜನರಿಗೆ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಸ್‌ಯುಸಿಐ (ಸಿ) ಒತ್ತಾಯ

ಪತ್ರಿಕಾ ಹೇಳಿಕೆ
ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜನರಿಗೆ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಸ್‌ಯುಸಿಐ (ಸಿ) ಒತ್ತಾಯ

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಕೆ. ಉಮಾ ಅವರು
“ರಾಜ್ಯದ ಕಲಬುರ್ಗಿ, ಯಾದಗಿರಿ, ಬೀದರ್, ವಿಜಯಪುರ, ರಾಯಚೂರು ಇನ್ನಿತರ ಜಿಲ್ಲೆಗಳ ನೂರಾರು ಹಳ್ಳಿಗಳು ಅತಿವೃಷ್ಟಿ ಮತ್ತು ಪ್ರವಾಹಕ್ಕೆ ತುತ್ತಾಗಿವೆ. ಜನ, ಜಾನುವಾರು, ಮನೆ ಮತ್ತು ಬೆಳೆಹಾನಿ ವ್ಯಾಪಕವಾಗಿದೆ.
ಇಂತಹ ಸಂದರ್ಭದಲ್ಲಿ ತೊಂದರೆಗೊಳಗಾದ ಜನರಿಗೆ ತಕ್ಷಣವೇ ಗಂಜಿ ಕೇಂದ್ರಗಳನ್ನು ತೆರೆದು ಅಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಜಾನುವಾರುಗಳಿಗೆ ಕೂಡ ಅಗತ್ಯಕ್ಕೆ ಅನುಗುಣವಾಗಿ ಮೇವು ಕೇಂದ್ರಗಳನ್ನು ಆರಂಭಿಸಬೇಕು.
ಹಾನಿಯಾದ ಮನೆಗಳಿಗೆ ಹಾನಿಗೆ ತಕ್ಕಂತೆ ಪರಿಹಾರ ಒದಗಿಸಬೇಕು.
ಹಾನಿಯಾದ ಬೆಳೆಗಳಿಗೆ ನ್ಯಾಯಯುತ , ಸಮರ್ಪಕ ಪರಿಹಾರ ನೀಡಬೇಕು. ಗೇಣಿ ಮತ್ತು ಗುತ್ತಿಗೆ ಆಧಾರದ ಕೃಷಿ ಭೂಮಿಯನ್ನು ಗುರುತಿಸಿ ಗೇಣಿದಾರರಿಗೆ ಪರಿಹಾರ ದೊರಕುವಂತೆ ನೋಡಬೇಕು.
ಸಾಂಕ್ರಾಮಿಕ ರೋಗಗಳು ಹರಡದಂತೆ ವೈದ್ಯಕೀಯ ಶಿಬಿರಗಳನ್ನು ತೆರೆಯಿರಿ.
ಪ್ರತಿಬಾರಿ ಮುಳುಗಡೆಯಾಗುವ ನದಿತೀರದ ಹಳ್ಳಿಗಳಿಗೆ ಸಮರ್ಪಕವಾದ ಪುನರ್ವಸತಿ ಯೋಜನೆ ರೂಪಿಸಬೇಕು.
ಕೇಂದ್ರ ಸರ್ಕಾರವು ಕೂಡ ತನ್ನ ನೈಸರ್ಗಿಕ ಪ್ರಕೋಪ ನಿಧಿಯಿಂದ ಪರಿಹಾರ ನೀಡಬೇಕು.

ರಾಜ್ಯ ಸರ್ಕಾರ ಮತ್ತು ಆಯಾ‌ ಜಿಲ್ಲಾಡಳಿತಗಳು ಸಮರದೋಪಾದಿಯಲ್ಲಿ‌ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ” ಎಂದು ಅವರು ಒತ್ತಾಯಿಸಿದ್ದಾರೆ.
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಆಯಾ ಜಿಲ್ಲಾ ಸಮಿತಿಗಳು ತಕ್ಷಣವೇ ಜನರ ನೆರವಿಗೆ ಧಾವಿಸುವಂತೆ ಅವರು ಕರೆ ನೀಡಿದ್ದಾರೆ.

ಸುದ್ದಿ ಇವರಿಂದ,

ಬಿ.ರವಿ
ರಾಜ್ಯ ಕಚೇರಿ ಕಾರ್ಯದರ್ಶಿ
ಎಸ್‌ಯುಸಿಐ (ಸಿ)
29.09.2025