ಜೂನ್ 26ರಂದು ನಿಧನರಾದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಹಿರಿಯ ಪಾಲಿಟ್‌ಬ್ಯೂರೋ ಸದಸ್ಯರು ಮತ್ತು ಜಾರ್ಖಂಡ್ ರಾಜ್ಯ ಸಂಘಟನಾ ಸಮಿತಿಯ ಕಾರ್ಯದರ್ಶಿಗಳಾದ ಕಾಮ್ರೇಡ್ ರಬಿನ್ ಸಮಾಜಪತಿ ಅವರ ಸ್ಮರಣ ಸಭೆ ಜುಲೈ 3ರಂದು ಕೊಲ್ಕತ್ತಾದಲ್ಲಿ ಜರುಗಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರವಾಶ್ ಘೋಷ್ ಅವರು ಕಾ. ಸಮಾಜಪತಿ ಅವರ ಬದುಕು ಮತ್ತು ಹೋರಾಟಗಳ ಕುರಿತು ತಿಳಿಸಿಕೊಟ್ಟರು. ದೇಶದ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯ ಕಾರ್ಯಕರ್ತರು ಮತ್ತು ಬೆಂಬಲಿಗರು ಭಾಗವಹಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ದೇಶದ ಶೋಷಿತ ಜನರ ಕ್ರಾಂತಿಕಾರಿ ಹೋರಾಟಕ್ಕೆ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಅವರಿಗೆ ನಮ್ಮ ಭಾವಪೂರ್ಣ ಕೆಂಪು ನಮನಗಳು!


