ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸಿಎನ್‌ಜಿ ಮೊದಲಾದ ಇಂಧನ ದರಗಳ ತೀವ್ರ ಏರಿಕೆಯ ವಿರುದ್ಧ ಎಸ್‌ಯುಸಿಐ(ಸಿ) ಪ್ರತಿಭಟನೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸಿಎನ್‌ಜಿ ಮೊದಲಾದ ಇಂಧನ ದರಗಳ ತೀವ್ರ ಏರಿಕೆಯನ್ನು ಖಂಡಿಸಿ, ಇವುಗಳ ಬೆಲೆ ನಿಯಂತ್ರಣಕ್ಕೆ, ತೆರಿಗೆ ಇಳಿಕೆಗೆ ಒತ್ತಾಯಿಸಿ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಸಂಘಟಿಸಲಾಯಿತು.