ಆಗಸ್ಟ್ 9ರಂದು ಬೆಂಗಳೂರಿನ ಗುಂಡೂರಾವ್ ಸಭಾಂಗಣದಲ್ಲಿ ನಡೆದ ಕಾರ್ಮಿಕ ವರ್ಗದ ಮಹಾನ್ ನಾಯಕರು ಹಾಗೂ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರೂ ಆದ ಕಾಮ್ರೇಡ್ ಶಿವದಾಸ್ ಘೋಷ್ ಅವರ 50ನೇ ಸ್ಮರಣ ವರ್ಷಾಚರಣೆ ಕಾರ್ಯಕ್ರಮದ ಕೆಲವು ಚಿತ್ರಗಳು.
ಈ ಸಾರ್ವಜನಿಕ ಸಭೆಗೆ ಪಕ್ಷದ ಪಾಲಿಟ್‌ಬ್ಯೂರೋ ಸದಸ್ಯರಾದ ಕಾ. ಕೆ. ರಾಧಾಕೃಷ್ಣ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದರು. ಪಕ್ಷದ ರಾಜ್ಯ ಸೆಕ್ರೆಟೇರಿಯಟ್ ಸದಸ್ಯರಾದ ಕಾ. ಸೋಮಶೇಖರ್ ಕೆ. ಅವರು ಕೂಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಕಾರ್ಯದರ್ಶಿಗಳಾದ ಕಾ. ಕೆ. ಉಮಾ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಪಕ್ಷದ ಸಂಗಾತಿಗಳು ಮತ್ತು ಬೆಂಬಲಿಗರು ಕಾ. ಘೋಷ್ ಅವರ ಚಿಂತನೆಗಳನ್ನು ಮತ್ತೆ ಮನನ ಮಾಡಿಕೊಂಡು ಹೊಸ ಉತ್ಸಾಹದೊಂದಿಗೆ ಮರಳಿದ್ದಾರೆ.
(ಕಾರ್ಯಕ್ರಮದ ವರದಿ ಮತ್ತು ಭಾಷಣಗಳ ಸಾರಾಂಶವನ್ನು ಮುಂದೆ ಕೊಡಲಾಗುವುದು)





