
ರಾಜ್ಯ ಮಟ್ಟದ ಮಹಿಳಾ ಶಿಬಿರ
ಮಹಿಳೆಯರನ್ನು ವೈಚಾರಿಕವಾಗಿ ಮತ್ತು ಸಂಘಟನಾತ್ಮಕವಾಗಿ ಸಜ್ಜುಗೊಳಿಸಲು, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್)ಯ ರಾಜ್ಯ ಸಮಿತಿಯ ನೇತೃತ್ವದಲ್ಲಿ 2026ರ ಜೂನ್ 27, 28,29 ರಂದು ರಾಜ್ಯ ಮಟ್ಟದ ಮಹಿಳಾ ಸಂಘಟನಾಕಾರರ ಅಧ್ಯಯನ ಶಿಬಿರವನ್ನು ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಸಂಘಟಿಸಲಾಗಿತ್ತು. ಚಿತ್ರದಲ್ಲಿ: ಎಸ್ಯುಸಿಐ(ಸಿ) ಪಕ್ಷದ ಪಾಲಿಟ್ಬ್ಯೂರೋ ಸದಸ್ಯರಾದ ಕಾ|| ಕೆ. ರಾಧಾಕೃಷ್ಣರವರು ಚರ್ಚೆ ನಡೆಸಿಕೊಟ್ಟರು. ವೇದಿಕೆಯಲ್ಲಿ ಎಡದಿಂದ: ಎಐಎಂಎಸ್ಎಸ್ ರಾಜ್ಯ ಕಾರ್ಯದರ್ಶಿ ಕಾ|| ಎಸ್. ಶೋಭಾ, ಅಖಿಲ ಭಾರತ ಉಪಾಧ್ಯಕ್ಷರಾದ ಕಾ|| ಬಿ.ಆರ್. ಅಪರ್ಣಾ, ಎಸ್ಯುಸಿಐ (ಸಿ) ರಾಜ್ಯ ಕಾರ್ಯದರ್ಶಿ ಕಾ|| ಕೆ. ಉಮಾ, ಎಐಎಂಎಸ್ಎಸ್ ರಾಜ್ಯಾಧ್ಯಕ್ಷರಾದ ಕಾ|| ಎಂ. ಎನ್. ಮಂಜುಳಾ






