ಯುದ್ಧವು ಯಾವಾಗಲೂ ರಾಜಕೀಯ ಸಂಘರ್ಷದ ಅತ್ಯಂತ ಹಿಂಸಾತ್ಮಕ ಅಭಿವ್ಯಕ್ತಿಯಾಗಿದೆ. ಆದರೆ ಸಾಮ್ರಾಜ್ಯವಾದ ಮತ್ತು ಕಾರ್ಮಿಕ ವರ್ಗದ ಕ್ರಾಂತಿಯ ಇಂದಿನ ಸಮಕಾಲೀನ ಕಾಲಘಟ್ಟದಲ್ಲಿ, ಇದು ಮಾರುಕಟ್ಟೆಗಳನ್ನು ಕಬಳಿಸಲು, ಆರ್ಥಿಕ ಪ್ರಾಬಲ್ಯ ಸಾಧಿಸಲು, ಪ್ರಭಾವ ವಲಯವನ್ನು ವಿಸ್ತರಿಸಲು ಮತ್ತು ಭೌಗೋಳಿಕ ರಾಜಕೀಯವನ್ನು ಮರುರಚಿಸಲು ಒಂದು ವ್ಯವಸ್ಥಿತ ಸಾಧನವಾಗಿ ಮಾರ್ಪಟ್ಟಿದೆ. ಸಾಮ್ರಾಜ್ಯಶಾಹಿ ಶಕ್ತಿಗಳ ನಡುವಿನ ಇಂತಹ ಸಶಸ್ತ್ರ ಅಧಿಕಾರದ ಸಂಘರ್ಷಗಳು ಅಥವಾ ಗುರಿಯಾದ ದೇಶಗಳ ಮೇಲಿನ ಸಾಮ್ರಾಜ್ಯಶಾಹಿ ಆಕ್ರಮಣಕಾರಿ ಯುದ್ಧಗಳಿಂದಾಗಿ, ಮಾನವಕುಲವು ಸಾವು, ಆಸ್ತಿಪಾಸ್ತಿಗಳ ನಾಶ, ಆರೋಗ್ಯ ಸೇವೆಯ ಏರುಪೇರು, ಮಾನಸಿಕ ಕಾಯಿಲೆಗಳು ಮುಂತಾದ ರೂಪಗಳಲ್ಲಿ ಭಾರಿ ನಷ್ಟವನ್ನು ಅನುಭವಿಸುತ್ತಿದೆ.
‘ನುಸುಳುಕೋರರು’ ಎಂಬುದೊಂದು ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ನಾಯಕರು ಮತ್ತು ಸಚಿವರು ಪದೇ ಪದೇ ಪುನರಾವರ್ತಿಸುತ್ತಿರುವ ಹೊಸದಾದ ಸಂಕಥನ. ಇದು ದೇಶದಲ್ಲಿ ಹೆಚ್ಚುತ್ತಿರುವ ಬಡತನ ಮತ್ತು ಸಂಕಷ್ಟಗಳ ನೈಜ ಕಾರಣವಾದ ನಿರ್ದಯ ಬಂಡವಾಳಶಾಹಿ ಶೋಷಣೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಹೂಡಿರುವ ಒಂದು ಚಾಣಾಕ್ಷ ತಂತ್ರ.
ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಾವಳಿಗಳಿಗೆ ತರಲಾದ ಇತ್ತೀಚಿನ ತಿದ್ದುಪಡಿಗಳು ಟೀಕೆಯ ಧ್ವನಿಯಷ್ಟೇ ಅಲ್ಲ, ಭಿನ್ನಾಭಿಪ್ರಾಯದ ಧ್ವನಿಯನ್ನೂ ಸಹ ಅಡಗಿಸುವ ಚಾಣಾಕ್ಷ ನಡೆಯಾಗಿದೆ. ಡೀಪ್‌ಫೇಕ್‌ಗಳು, ತಪ್ಪು ಮಾಹಿತಿ, ಎಐ-ಚಾಲಿತ ವಂಚನೆ ಮತ್ತು ಆನ್‌ಲೈನ್ ಹಾನಿಗಳನ್ನು ತಡೆಗಟ್ಟಲು ಹೊಸ ಐಟಿ ತಿದ್ದುಪಡಿಗಳು ಅಗತ್ಯವಾಗಿವೆ ಎಂದು ಸರ್ಕಾರ ಪ್ರತಿಪಾದಿಸುತ್ತದೆ. ಇಂತಹ ಅಪಾಯಗಳು ನಿಜ ಎಂಬುದರಲ್ಲಿ ಸಂದೇಹವೇನಿಲ್ಲ. ಆದರೆ ಈ ತಿದ್ದುಪಡಿಗಳ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಪೋಸ್ಟ್ ಕುರಿತಾಗಿ ದೂರು ಬಂದಾಗ ಅದನ್ನು ತೆಗೆದು ಹಾಕಲು ಇರುವ ಕಾಲಾವಧಿಯನ್ನು ಕುಗ್ಗಿಸಲಾಗಿದೆ. ಅಧಿಕೃತ ನೋಟಿಸ್ ಬಂದ ಕೆಲವು ಗಂಟೆಗಳ ಒಳಗೆ ಪ್ಲಾಟ್‌ಫಾರ್ಮ್ಗಳು (ಫೇಸ್‌ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮೊದಲಾದ ಜಾಲತಾಣ ವೇದಿಕೆಗಳು) ನಿರ್ದಿಷ್ಟ ವಿಷಯವನ್ನು ತೆಗೆದುಹಾಕುವ ಅಗತ್ಯವನ್ನು ಉಂಟುಮಾಡಿವೆ. ಕಾರ್ಯಾಂಗ ಸಂಸ್ಥೆಗಳೇ ಏಕಕಾಲದಲ್ಲಿ ದೂರುದಾರ, ತನಿಖಾಧಿಕಾರಿ, ಪ್ರಾಸಿಕ್ಯೂಟರ್ ಮತ್ತು ಸೆನ್ಸಾರ್ ಆಗಿ ಬದಲಾದಾಗ, ಸಾಂವಿಧಾನಿಕ ಸ್ವಾತಂತ್ರ‍್ಯವು ಕೇವಲ ಒಂದು ಆಡಳಿತಾತ್ಮಕ ತೊಡಕಾಗಿ ಪರಿಣಮಿಸುತ್ತದೆ.
ಕಡು ಕೋಮುವಾದಿ ಬಿಜೆಪಿಯು ಮೇಘಾಲಯದ ಗಾರೋ ಯುವಕರ ಒಂದು ವರ್ಗದ ನಡುವೆ ಅಂಧಾಭಿಮಾನ ಮತ್ತು ಕೋಮು ಉನ್ಮಾದವನ್ನು ಪ್ರಚೋದಿಸುವ ಮೂಲಕ, ದಶಕಗಳಿಂದ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಂ ಜನರ ಪ್ರಜಾಸತ್ತಾತ್ಮಕ ಮತ್ತು ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲು ಹಪಹಪಿಸುತ್ತಿದೆ. ಇದರ ಪರಿಣಾಮವಾಗಿ ಚಿಬಿನಾಂಗ್, ರಾಜಾಬಾಲಾ ಮತ್ತು ಭೈತ್ಬಾರಿ ಪ್ರದೇಶಗಳು ಈಗ ಅತ್ಯಂತ ಉದ್ವಿಗ್ನಗೊಂಡಿವೆ.
ಭಾರತದ ಇತಿಹಾಸದಲ್ಲಿ 1857ರ ಸಿಪಾಯಿ ದಂಗೆಯ ಮುನ್ನವೇ ಈಸ್ಟ್ ಇಂಡಿಯಾ ಕಂಪನಿಯ ಅಡಿಪಾಯವನ್ನು ಅಲುಗಾಡಿಸಿದ ಅತ್ಯಂತ ಉಗ್ರ ಮತ್ತು ವ್ಯವಸ್ಥಿತ ಹೋರಾಟವೊಂದು ಪೂರ್ವ ಭಾರತದಲ್ಲಿ ನಡೆದಿತ್ತು. ಅದೇ ಬ್ರಿಟಿಷ್ ವಸಾಹತುವಾದದ ವಿರುದ್ಧ ಮೊಳಗಿದ ಮೊದಲ ಬಂಡಾಯ ‘ಸಂತಾಲ್ ದಂಗೆ’ ಅಥವಾ ‘ಸಂತಾಲ್ ಹುಲ್’. ಪ್ರಸ್ತುತ ಜಾರ್ಖಂಡ್ ರಾಜ್ಯದ ರಾಜ್‌ಮಹಲ್ ಬೆಟ್ಟಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ 1855-56 ರಲ್ಲಿ ನಡೆದ ಈ ಬುಡಕಟ್ಟು ಕ್ರಾಂತಿಯು, ಕೇವಲ ಬ್ರಿಟಿಷರ ಕ್ರೂರ ದಬ್ಬಾಳಿಕೆಯ ವಿರುದ್ಧ ಮಾತ್ರವಲ್ಲದೆ ಅವರ ಬೆಂಬಲಕ್ಕಿದ್ದ ಸ್ಥಳೀಯ ಲೇವಾದೇವಿಗಾರರು ಮತ್ತು ಜಮೀನ್ದಾರರ ಶೋಷಣೆ ವಿರುದ್ಧದ ಸಂಗ್ರಾಮವಾಗಿತ್ತು.
ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ನೀಡಿರುವ ವರದಿಯ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿರುವ ಅಪ್ರಚೋದಿತ ಯುದ್ಧವು ಇತಿಹಾಸದಲ್ಲೇ ಅತ್ಯಂತ ಭೀಕರ ತೈಲ ಬಿಕ್ಕಟ್ಟಿಗೆ ಕಾರಣವಾಗಿದೆ. ಇಂದಿಗೂ ಜಾಗತಿಕ ಆರ್ಥಿಕತೆ ಮತ್ತು ದೈನಂದಿನ ಬದುಕು ಇಂಧನದ ಮೇಲೆಯೇ ಸಂಪೂರ್ಣ ಅವಲಂಬಿತವಾಗಿದೆ ಎಂಬುದನ್ನು ಈ ಪ್ರಸ್ತುತ ಪರಿಸ್ಥಿತಿ ಸಾಬೀತುಪಡಿಸಿದೆ. ಜಾಗತಿಕ ಬಂಡವಾಳವಾದ ಮತ್ತು ಸಾಮ್ರಾಜ್ಯವಾದದ ಮುಖ್ಯಸ್ಥ ಅಮೆರಿಕ, ತೈಲದ ಮೇಲಿನ ಲೋಭ ಹಾಗೂ ನಿಯಂತ್ರಣಕ್ಕಾಗಿ ಜಗತ್ತಿನಾದ್ಯಂತ ಕಾಲಕಾಲಕ್ಕೆ ಇಂತಹ ಸಂಘರ್ಷಗಳಿಗೆ ತುಪ್ಪ ಸುರಿಯುತ್ತಲೇ ಬಂದಿದೆ.
ಪ್ರಥಮ ಕಾರ್ಮಿಕವರ್ಗದ ಕ್ರಾಂತಿ ಮತ್ತು ಸಮಾಜವಾದಿ ರಾಜ್ಯದ ಶಿಲ್ಪಿ ಕಾಮ್ರೇಡ್ ಲೆನಿನ್ ಅವರ 102ನೇ ಮರಣ ವಾರ್ಷಿಕದ ಸಂದರ್ಭದಲ್ಲಿ, ಜನವರಿ 21, 2026 ರಂದು ಕೊಲ್ಕತ್ತಾದಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರವಾಶ್ ಘೋಷ್ ಮಾತನಾಡಿದರು. ಅವರು ಬಂಗಾಳಿಯಲ್ಲಿ ಮಾಡಿದ ಭಾಷಣವನ್ನು ನಂತರ ಸ್ವತಃ ಕಾ. ಪ್ರವಾಶ್ ಘೋಷ್ ತಿದ್ದುಪಡಿ ಮಾಡಿದ ಮೇಲೆ ಮುದ್ರಣ ಮಾಡಲಾಯಿತು. ನಂತರ ಅದನ್ನು ಪ್ರೊಲೆಟೇರಿಯನ್ ಎರಾ - ನಮ್ಮ ಪಕ್ಷದ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಆ ಇಂಗ್ಲಿಷ್ ಅನುವಾದದ ಆಯ್ದ ಭಾಗಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಿದ್ದೇವೆ. ಅನುವಾದದಲ್ಲಿ ಕೊರತೆ ಕಂಡು ಬಂದರೆ ಅದರ ಸಂಪೂರ್ಣ ಜವಾಬ್ದಾರಿ ಸಂಪಾದಕ ಮಂಡಳಿಗೆ ಸೇರಿದ್ದು
1975, ಏಪ್ರಿಲ್‌ನಲ್ಲಿ ವಿಯೆಟ್ನಾಂ, ಸಾಮ್ರಾಜ್ಯಶಾಹಿ ಅಮೆರಿಕಾ ತನ್ನ ವಿರುದ್ಧ ಹೂಡಿದ ಯುದ್ಧದಲ್ಲಿ ಅಭೂತಪೂರ್ವ ವಿಜಯ ಸಾಧಿಸಿತು. ಈ ನೆನಪಿನಲ್ಲಿ, ನಮ್ಮ ಪಕ್ಷ ಎಸ್‌ಯುಸಿಐ(ಸಿ)ಯ ಪಾಲಿಟ್ ಬ್ಯೂರೊ ಸದಸ್ಯರಾದ ಕಾ.ಕೆ.ರಾಧಾಕೃಷ್ಣ ಅವರು ಬರೆದ ಇಂಗ್ಲಿಷ್ ಲೇಖನ, ಏಷ್ಯಾ ಪೆಸಿಫಿಕ್‌ನಿಂದ ಪ್ರಕಟವಾಗುತ್ತಿರುವ ಎಡಪಂಥೀಯ ಪತ್ರಿಕೆ, ಹ್ಯಾಮ್ಮರ್ Hammer)ನಲ್ಲಿ ಪ್ರಕಟವಾಗಿತ್ತು. ಅದರ ಸಂಕ್ಷಿಪ್ತ ಭಾಷಾಂತರ ಇಲ್ಲಿದೆ.
8ಗಂಟೆ ದುಡಿಮೆಯ ಅವಧಿಗಾಗಿ ಕಾರ್ಮಿಕರು ಹೋರಾಡುತ್ತಿದ್ದಾಗ, 1886ರ ಮೇ 1ರಂದು ಅಮೇರಿಕದಾದ್ಯಂತ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಅದನ್ನು ಬೆಂಬಲಿಸಿ ಮೆಕ್‌ಕಾರ್ಮಿಕ್ ಕಂಪನಿಯ ಬಳಿ ಮೇ 3ರಂದು ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರ ಮೇಲೆ ಅಪ್ರಚೋದಿತವಾಗಿ ಪೊಲೀಸರು ಗೋಲಿಬಾರ್ ಮಾಡಿ, ಕೆಲವು ಕಾರ್ಮಿಕರು ಸಾವನ್ನಪ್ಪಿದ್ದರು. ಆ ಘಟನೆಯ ಮರುದಿನವೇ, ಅಂದರೆ, ಮೇ 4ರಂದು ಹೇ ಮಾರ್ಕೆಟ್ ಚೌಕದಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನವು ಜರುಗಿತ್ತು. ಆಗ ‘ಅನಾಮಿಕನೊಬ್ಬ’ (ಬಂಡವಾಳಿಗರ ಏಜೆಂಟ್) ಎಸೆದ ಬಾಂಬ್ ಹಲವರ ಸಾವಿಗೆ ಕಾರಣವಾಯಿತು. ಬಾಂಬ್ ಎಸೆದವನನ್ನು ಪತ್ತೆ ಹಚ್ಚದ ಪೊಲೀಸರು, ಕಾರ್ಮಿಕ ಹೋರಾಟದ ಮುಂಚೂಣಿ ನಾಯಕತ್ವದಲ್ಲಿದ್ದವರನ್ನು ಹುಡುಕಿ ಅವರನ್ನು ಬಂಧಿಸಿದರು. ಅವರ ಮೇಲೆ ಕೊಲೆ ಅಪಾದನೆಯ ಸುಳ್ಳು ಆರೋಪ ಹೊರಿಸಿ ವಿಚಾರಣೆ ಎಂಬ ನಾಟಕವನ್ನಾಡಿ, 7 ಜನ ಕಾರ್ಮಿಕ ನಾಯಕರಿಗೆ ಗಲ್ಲು ಶಿಕ್ಷೆಯನ್ನು ಮತ್ತು ಒಬ್ಬರಿಗೆ 15 ವರ್ಷಗಳ ಕಠಿಣ ಸಜೆಯನ್ನು ವಿಧಿಸಲಾಯಿತು. ಈ ಮೊಕದ್ದಮೆಯನ್ನು, ಇಡೀ ವಿಶ್ವದ ಇತಿಹಾಸದಲ್ಲಿ ದೊರಕುವ ನ್ಯಾಯದ ಅಣಕಗಳ ಪಟ್ಟಿಯಲ್ಲೇ ಅತ್ಯಂತ ಭಯಾನಕವಾದದ್ದು ಎಂದು ಗುರುತಿಸಲಾಗುತ್ತದೆ. ಗಲ್ಲು ಶಿಕ್ಷೆಗೆ ಒಳಗಾದವರಲ್ಲಿ ಆಲ್ಬರ್ಟ್ ಪಾರ್ಸನ್ಸ್ ಪ್ರಮುಖರು. ಅರಾಜಕತಾವಾದದಲ್ಲಿ ನಂಬಿಕೆ ಇಟ್ಟಿದ್ದ ಪಾರ್ಸನ್ಸ್ ಬಂಡವಾಳವಾದದ ಕ್ರೂರ ಶೋಷಣೆಯ ವಿರುದ್ಧ ಛಲದಿಂದ ಹೋರಾಡಿದ ಧೀರ. ಪಾರ್ಸನ್ಸ್ ‘ದಿ ಅಲಾರ್ಮ್’(ಷಿಕಾಗೊ) ಎಂಬ ಅರಾಜಕತಾವಾದಿ ವಾರಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಪ್ರಸ್ತುತ ಲೇಖನದಲ್ಲಿ, ಅವರು ಬಂಡವಾಳಶಾಹಿ ಪದ್ಧತಿಯಲ್ಲಿ ‘ಸಮಾನ ಹಕ್ಕುಗಳು’ ಹೇಗೆ ಒಂದು ಅಪಹಾಸ್ಯ ಎನ್ನುವುದನ್ನು ತೋರಿಸಿದ್ದಾರೆ. ಈ ಲೇಖನವು ಅವರು ಸಂಪಾದಕರಾಗಿದ್ದ ಪತ್ರಿಕೆಯ ಸಂಪುಟ-1, ಸಂಚಿಕೆ-7 (ನವೆಂಬರ್ 15, 1884), 2 ನೇ ಪುಟದಲ್ಲಿ ಸಂಪಾದಕೀಯವಾಗಿ ಪ್ರಕಟವಾಗಿತ್ತು.
ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಬಹಳ ಮಹತ್ವವಿದೆ. ಚುನಾವಣೆಯು ನ್ಯಾಯಸಮ್ಮತವಾಗಿ ನಡೆಯಲು ದೋಷ ರಹಿತ ಮತದಾರರ ಪಟ್ಟಿ ಒಂದು ಪ್ರಮುಖ ಅವಶ್ಯಕತೆಯಾಗಿರುತ್ತದೆ. ಭಾರತದ ಸಂವಿಧಾನವು ಜನಪ್ರತಿನಿಧಿಗಳ ಕಾಯ್ದೆಯ ಮೂಲಕ ಮತದಾರರ ಪಟ್ಟಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಭಾರತ ಚುನಾವಣಾ ಆಯೋಗ(ಇಸಿಐ)ಕ್ಕೆ ನೀಡಿದೆ. ಚುನಾವಣಾ ಆಯೋಗವು ಪ್ರತಿ ವರ್ಷ, ಪ್ರತಿ ಚುನಾವಣೆಯ ಸಂದರ್ಭದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡುತ್ತಲೇ ಇರುತ್ತದೆ. ಹಾಗಿದ್ದೂ ಸಹ, ಪ್ರತಿ ಚುನಾವಣೆಯಲ್ಲಿಯೂ ಮತದಾರರ ಪಟ್ಟಿಯ ದೋಷಗಳು ವರದಿಯಾಗುತ್ತಲೇ ಇರುತ್ತವೆ ಕೂಡ. ದೊಡ್ಡ ಪಕ್ಷಗಳು ತಮಗೆ ಅನುಕೂಲವಾಗುವಂತೆ ಹೆಸರುಗಳನ್ನು ಸುಳ್ಳು ಸೇರ್ಪಡೆ ಮಾಡಿಸುವ, ತಮ್ಮ ವಿರೋಧಿಗಳ ಹೆಸರನ್ನು ಅರ್ಹರಿದ್ದೂ ಸಹ ಕೈ ಬಿಡುವಂತೆ ಮಾಡುವ ವಿದ್ಯಮಾನಗಳು ಈ ಹಿಂದೆಯೂ ಹಲವು ಬಾರಿ ಬಯಲಿಗೆ ಬಂದಿವೆ.
ಸಾಮಾನ್ಯವಾಗಿ, ಪ್ರತಿ ವರ್ಷವೂ ನಡೆಯುವ ಮತದಾರ ಪಟ್ಟಿ ಪರಿಷ್ಕರಣೆಯು-ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್‌ಆರ್-Special Summary Revision-SSR). ಅಂದರೆ, ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ಸಾವು ಇತ್ಯಾದಿಗಳ ಕುರಿತ ಬದಲಾವಣೆಗಳು ಸ್ವಯಂಪ್ರೇರಣೆಯಿಂದ ಮತದಾರರೇ ಮನವಿ ಮಾಡಿದಾಗ ಮಾಡುವಂತಹವುಗಳು. ಆದರೆ, ಹಲವು ವರ್ಷಗಳಿಗೊಮ್ಮೆ, ಮತದಾರರ ಪಟ್ಟಿಯಲ್ಲಿ ಸಮಗ್ರ ಪರಿಷ್ಕರಣೆ ಮಾಡುವ ಅಧಿಕಾರವನ್ನು ಚುನಾವಣಾ ಆಯೋಗ ಹೊಂದಿದೆ. ಈ ಹಿಂದೆ, 2002ರಲ್ಲಿ ಇಂತಹ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಲಾಗಿತ್ತು. ಆಗ ಕಾಣದಿದ್ದ, ಕೇಳದಿದ್ದ ವಿವಾದಗಳು ಈಗ ಭುಗಿಲೆದ್ದಿವೆ. ಇದು ಏಕೆ?
ಎಸ್‌ಐಆರ್ - ಹಲವು ಪ್ರಶ್ನೆಗಳು!
ಹಿಂದೆ ವಿಶೇಷ ಸಮಗ್ರ ಪರಿಷ್ಕರಣೆಯ ಸಂದರ್ಭದಲ್ಲಿ ಬೂತ್‌ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಅರ್ಹ ಮತದಾರರ ಹೆಸರುಗಳನ್ನು ಕೇಳಿ ಅವನ್ನು ಸೇರಿಸುತ್ತಿದ್ದರು. ಯಾವುದೇ ದಾಖಲೆ ಪತ್ರಗಳನ್ನು ಅವರು ಕೇಳುತ್ತಿರಲಿಲ್ಲ. ಆದರೆ, ಈಗ ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಹಲವಾರು ದಾಖಲೆಗಳನ್ನು ಸಲ್ಲಿಸಲು ಒತ್ತಾಯಿಸುತ್ತಿದೆ. 2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ಅಥವಾ ನಿಮ್ಮ ಕುಟುಂಬಸ್ಥರ ಹೆಸರುಗಳು ಇದ್ದರೆ ಸರಿ, ಇಲ್ಲವಾದರೆ, ನೀವು ‘ಭಾರತೀಯ ಪ್ರಜೆ’ ಎಂದು ಸಾಬೀತು ಮಾಡಲು ಬೇಕಾದ 11 ದಾಖಲೆಗಳಲ್ಲಿ ಕನಿಷ್ಠ ಒಂದನ್ನು ಸಲ್ಲಿಸಬೇಕಾಗುತ್ತದೆ ಎನ್ನುತ್ತದೆ ಇಸಿಐ. ಜನನ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಪೋಷಕರ ಜನನ ಪ್ರಮಾಣ ಪತ್ರ, ಭೂ ದಾಖಲೆ, 1987ಕ್ಕೂ ಹಿಂದಿನ ಯಾವುದಾದರೂ ಸರ್ಕಾರಿ ಗುರುತಿನ ಚೀಟಿ ಇಂತಹ ಯಾವುದಾದರೂ ದಾಖಲೆಗಳು ನಿಮ್ಮ ಬಳಿ ಇರಬೇಕಾಗುತ್ತದೆ. ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾ ಮುಸ್ಲಿಮರು ದೇಶದೊಳಗೆ ಅಕ್ರಮವಾಗಿ ನುಸುಳಿದ್ದಾರೆ, ಅವರು ನಕಲಿ ಆಧಾರ್, ಮತದಾರರ ಚೀಟಿ, ಪಡಿತರ ಚೀಟಿ ಇತ್ಯಾದಿಗಳನ್ನು ಪಡೆದುಕೊಂಡಿದ್ದಾರೆ ಎಂಬ ಬಿಜೆಪಿ ಎಬ್ಬಿಸಿದ ಗಲಾಟೆಗೆ ಪೂರಕವಾಗಿ ಚುನಾವಣಾ ಆಯೋಗವು ನಡೆದುಕೊಳ್ಳುತ್ತಿದೆ. ತನಿಖಾ ಸಂಸ್ಥೆಗಳು ಮತ್ತು ಆಡಳಿತ ವ್ಯವಸ್ಥೆಗಳು ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವ ಬದಲಿಗೆ, ಪ್ರತಿಯೊಬ್ಬ ಭಾರತೀಯನಿಗೂ, ‘ನೀನು ಈ ದೇಶದ ಪ್ರಜೆ’ ಎಂದು ದಾಖಲೆ ತೋರಿಸು ಎಂದು ಚುನಾವಣಾ ಆಯೋಗವು ಒತ್ತಾಯ ಮಾಡುತ್ತಿದೆ. ನಮ್ಮ ದೇಶದಲ್ಲಿ ಎಷ್ಟು ಜನರ ಬಳಿಯಲ್ಲಿ ಇಂತಹ ಸರಿಯಾದ ದಾಖಲೆಗಳು ಲಭ್ಯವಿವೆ? ಜೊತೆಗೆ, ಈಗ ಸರ್ಕಾರವೇ ನೀಡಿರುವ ಪಡಿತರ ಚೀಟಿ, ಆಧಾರ್, ಮತದಾರರ ಗುರುತಿನ ಚೀಟಿಗಳನ್ನೇ ಚುನಾವಣಾ ಆಯೋಗ ಮತದಾರ ಪಟ್ಟಿ ಸೇರ್ಪಡೆಗೆ ಪರಿಗಣಿಸುತ್ತಿಲ್ಲ!
ಪೌರತ್ವಕ್ಕೂ ಚುನಾವಣಾ ಆಯೋಗಕ್ಕೂ ಎತ್ತಣದೆತ್ತಣ ಸಂಬಂಧ?
ಒಬ್ಬ ವ್ಯಕ್ತಿಯ ಪೌರತ್ವವನ್ನು ಪತ್ತೆ ಹಚ್ಚುವ ಅಥವಾ ಪ್ರಶ್ನಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆಯೇ ಎಂಬುದು ಮೂಲಭೂತ ಪ್ರಶ್ನೆ. ಏಕೆಂದರೆ, ಈ ಕೆಲಸವನ್ನು ಚುನಾವಣಾ ಆಯೋಗದ ಪರವಾಗಿ, ಸ್ಥಳೀಯ ಮಟ್ಟದಲ್ಲಿ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಇನ್ನಿತರರು ಮಾಡುತ್ತಿದ್ದಾರೆ. ವ್ಯಕ್ತಿಯೊಬ್ಬರ ಪೌರತ್ವವನ್ನು ಪ್ರಶ್ನಿಸುವ ಅಧಿಕಾರ ಕಾನೂನಾತ್ಮಕವಾಗಿ ಇವರಿಗೆ ಇದೆಯೇ? ‘ಇಲ್ಲ’ ಎನ್ನುವುದೇ ಬಹುತೇಕ ಕಾನೂನುತಜ್ಞರ ಅಭಿಪ್ರಾಯವಾಗಿದೆ. ಈ ವಿಷಯವು ಈಗ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದೆ. ಮತದಾರನಾಗಿ ಅರ್ಹತೆ ಪಡೆಯಲು 18 ವರ್ಷ ಮೇಲ್ಪಟ್ಟ ಭಾರತೀಯ ಪ್ರಜೆಯಾಗಿರಬೇಕು, ಇದನ್ನು ಖಚಿತಪಡಿಸಿಕೊಳ್ಳುವ ಅಧಿಕಾರ ತನಗಿದೆ ಎಂದು ಸಬೂಬು ಹೇಳಿ ಚುನಾವಣಾ ಆಯೋಗವು ಪ್ರಶ್ನೆಗೆ ನೇರವಾಗಿ ಉತ್ತರಿಸದೆ ತಪ್ಪಿಸಿಕೊಳ್ಳುತ್ತಿದೆ. ಇಷ್ಟಾದರೂ ಸಹ ಸರ್ವೋಚ್ಛ ನ್ಯಾಯಾಲಯವು ಈ ಎಸ್‌ಐಆರ್ ಪ್ರಕ್ರಿಯೆಗೆ ತಡೆ ನೀಡಿಲ್ಲ.
ಇತ್ತೀಚೆಗೆ ತಾನೆ ಎಸ್‌ಐಆರ್ ನಡೆದ ಬಿಹಾರ, ಪಶ್ಚಿಮ ಬಂಗಾಳಗಳಲ್ಲಿ ಲಕ್ಷಾಂತರ ಮಂದಿ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ತಾರ್ಕಿಕವಾಗಿ ತಾಳೆಯಾಗದಿರುವುದು (Logical Discrepancy) ಎಂಬ ಬಿಹಾರದಲ್ಲಿ ಬಳಸದಿದ್ದ ಹೊಸದೊಂದು ನೆಪ ನೀಡಿ ಪ.ಬಂಗಾಳದಲ್ಲಿ 27 ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಅವರೆಲ್ಲರೂ ಈ ಬಾರಿ ಚುನಾವಣೆಯಲ್ಲಿ ತಮ್ಮ ಒಂದು ಮೂಲಭೂತ ಹಕ್ಕನ್ನು ಕಳೆದುಕೊಂಡಿದ್ದಾರೆ. ಲಭ್ಯ ದಾಖಲೆಗಳಲ್ಲಿ ಇರುವ ಸಣ್ಣಪುಟ್ಟ ಏರುಪೇರುಗಳೇ ಇದಕ್ಕೆ ಕಾರಣ ಎಂದೂ ಕಂಡುಬಂದಿದೆ. ಹೆಸರುಗಳಲ್ಲಿನ ಅಕ್ಷರಗಳ ನಡುವೆ, ವಯಸ್ಸು ಇತ್ಯಾದಿಗಳಲ್ಲಿ ಇರುವ ವ್ಯತ್ಯಾಸಗಳನ್ನು ಪಟ್ಟಿ ಮಾಡಿರುವುದರಿಂದ ಲಕ್ಷಾಂತರ ಜನ ಈಗ ನ್ಯಾಯಾಲಯಗಳಿಗೆ ಅಲೆದಲೆದು ತಮ್ಮ ಪೌರತ್ವ ಮತ್ತು ಮತದಾನದ ಹಕ್ಕನ್ನು ಪಡೆಯಬೇಕಾಗಿದೆ. ಸರ್ಕಾರ ನೀಡುವ ದಾಖಲೆಗಳಲ್ಲಿ ಕಣ್ತಪ್ಪಿನ ದೋಷಗಳು ಸರ್ವೇ ಸಾಮಾನ್ಯವಾಗಿರುವ ಸಮಸ್ಯೆ. ಇದಕ್ಕಾಗಿ ಒಬ್ಬ ಪ್ರಜೆಯ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ಕೊಟ್ಟವರು ಯಾರು?
ವಾಸ್ತವದಲ್ಲಿ ಒಬ್ಬ ವ್ಯಕ್ತಿಯ ಪೌರತ್ವವನ್ನು ನಿರ್ಧರಿಸುವ ಅಧಿಕಾರ ಇರುವುದು ಗೃಹ ಸಚಿವಾಲಯಕ್ಕೆ. ಹಾಗಾಗಿ ಈಗಾಗಲೇ ದೇಶದಲ್ಲಿ ವಾಸವಿರುವ ವ್ಯಕ್ತಿಯೊಬ್ಬನ ಪೌರತ್ವ ತೀರ್ಮಾನಿಸಲು ಯಾವ ದಾಖಲೆಯು ಮಾನ್ಯವಾಗಿದೆ ಎಂಬ ಪಟ್ಟಿಯನ್ನು ಗೃಹ ಸಚಿವಾಲಯ ಮುಂಚಿತವಾಗಿ ಪ್ರಕಟಿಸಬೇಕು. ಅವುಗಳನ್ನು ಆಧರಿಸಿ ಮಾತ್ರವೇ ಪೌರತ್ವ ಖಚಿತಪಡಿಸಿಕೊಳ್ಳಲು ಸಾಧ್ಯ ಎಂದು ಕೆಲವು ಕಾನೂನುತಜ್ಞರು ವಾದಿಸುತ್ತಾರೆ.
ಇಸಿಐ ಇಂದು ಸ್ವಾಯತ್ತವಲ್ಲ, ಅದು ಸರ್ಕಾರದ ಕೈಗೊಂಬೆ
ಇಂದು ಇತರೆಲ್ಲಾ ಸಾಂವಿಧಾನಿಕ ಸಂಸ್ಥೆಗಳಂತೆ ಚುನಾವಣಾ ಆಯೋಗವು ಸಹಾ ಕೇಂದ್ರ ಬಿಜೆಪಿ ಸರ್ಕಾರದ ಕೈಗೊಂಬೆಯಾಗಿದೆ. ಈ ಹಿಂದೆ, ಚುನಾವಣಾ ಆಯುಕ್ತರನ್ನು ಪ್ರಧಾನಿ, ವಿಧಾನ ವಿರೋಧ ಪಕ್ಷದ ನಾಯಕ ಮತ್ತು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೇರಿರುವ ಸಮಿತಿಯೊಂದು ಆಯ್ಕೆ ಮಾಡುತ್ತಿತ್ತು. ಈಗ ಸ್ವಲ್ಪ ಕಾಲದ ಹಿಂದೆ ಈ ವಿಧಾನಕ್ಕೆ ಬಿಜೆಪಿ ಸರ್ಕಾರವು ತಿದ್ದುಪಡಿ ಮಾಡಿ, ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಕೈಬಿಟ್ಟು ಆ ಸ್ಥಾನದಲ್ಲಿ ಓರ್ವ ಕೇಂದ್ರ ಸಂಪುಟ ಸಚಿವರನ್ನು ಸೇರಿಸಿಕೊಂಡಿದೆ. ಇದರಿಂದಾಗಿ, ಕೇಂದ್ರ ಸರ್ಕಾರ ತನಗೆ ಬೇಕಾದವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲು ಸಾಧ್ಯವಾಗಿದೆ. ಚುನಾವಣಾ ಆಯೋಗವು ರಾಜಕೀಯ ತಟಸ್ಥತೆಯ ನಿಲುವು ಹೊಂದಿರಬೇಕು ಎಂಬ ಸಾಂವಿಧಾನಿಕ ಆಶಯವನ್ನು ಮಣ್ಣುಪಾಲು ಮಾಡಲಾಗಿದೆ. ಈ ಕಾರಣದಿಂದಲೇ, ಈ ಎಸ್‌ಐಆರ್ ಕುರಿತು ಗುಮಾನಿ ಇದೆ.
ನಮ್ಮ ರಾಜ್ಯದಲ್ಲೂ, ಎಸ್‌ಐಆರ್ ಪ್ರಕ್ರಿಯೆಯು ಗುಪ್ತಗಾಮಿನಿಯ ರೀತಿಯಲ್ಲಿ ಗೌಪ್ಯವಾಗಿ ನಡೆಯುತ್ತಿದೆ. 2002ರ ಮತದಾರರ ಪಟ್ಟಿಯೊಂದಿಗೆ 2025ರ ಮತದಾರರನ್ನು ಹೊಂದಾಣಿಕೆ ಮಾಡುವ ಕೆಲಸವನ್ನು ಬೂತ್ ಮಟ್ಟದ ಅಧಿಕಾರಿ(ಬಿಎಲ್‌ಓ)ಗಳು ಮಾಡುತ್ತಿದ್ದಾರೆ. ಅದನ್ನು ಹೇಗೆ ಮಾಡುತ್ತಾರೆ, ವಲಸೆ ಹೋದವರು ಏನು ಮಾಡುವುದು, ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ಇರುವವರು ಮನೆ ಬದಲಾಯಿಸಿದ್ದರೆ ಏನು ಮಾಡಬೇಕು, ಅವರ ಹೆಸರು ಪಟ್ಟಿಯಲ್ಲಿ ಇದೆಯೇ ಅಥವಾ ಇಲ್ಲವೇ ಎಂದು ತಿಳಿಯುವ ಬಗೆ ಹೇಗೆ - ಈ ಎಲ್ಲ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಯಾವುದೇ ಪಾರದರ್ಶಕತೆ ಇಲ್ಲ. ಎಸ್‌ಐಆರ್ ವಿರೋಧಿಸುವ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಹಾಗಿದ್ದರೂ ಸಹ, ಇಲ್ಲಿ, ಅರ್ಹ ಮತದಾರರ ಹೆಸರು ಅಳಿಸದಂತೆ ಮಾಡಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಅಸ್ಪಷ್ಟವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ, ನಮ್ಮ ರಾಜ್ಯದಲ್ಲಿಯೂ ಸಹ ಲಕ್ಷಾಂತರ ಮಂದಿ ತಮ್ಮ ಮತದಾನದ ಹಕ್ಕನ್ನು, ಆ ಮೂಲಕ ಪೌರತ್ವವನ್ನು ಕೂಡ ಕಳೆದುಕೊಳ್ಳುವ ಅಪಾಯ ಎದುರಾಗಿದೆ. ಬಡವರು, ಆಸ್ತಿಹೀನರು, ಅಶಿಕ್ಷಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ವಲಸೆ ಕಾರ್ಮಿಕರು, ವಿವಾಹೋತ್ತರ ವಾಸಸ್ಥಳ ಬದಲಾದ ಮಹಿಳೆಯರು ದಾಖಲೆಗಳ ಕೊರತೆಯನ್ನು ಎದುರಿಸುತ್ತಾರೆ. ಬಿಹಾರ, ಪ.ಬಂಗಾಳಗಳಲ್ಲಿ ತಮ್ಮ ಹಕ್ಕುಗಳನ್ನು ಕಳೆದುಕೊಂಡವರು ಬಹುತೇಕ ಇಂಥವರೇ ಆಗಿದ್ದಾರೆ. ವಿಚಿತ್ರವೇನೆಂದರೆ, ಇಷ್ಟೆಲ್ಲಾ ಆದರೂ ಸಹ ಈ ಎಸ್‌ಐಆರ್ ಪ್ರಕ್ರಿಯೆಯಿಂದ ಎಷ್ಟು ಮಂದಿ ನುಸುಳುಕೋರರನ್ನು ಗುರುತಿಸಲಾಯಿತು ಮತ್ತು ಎಷ್ಟು ಜನರನ್ನು ದೇಶದಿಂದ ಹೊರದಬ್ಬಲಾಯಿತು ಎನ್ನುವ ಅಂಕಿಸಂಖ್ಯೆಗಳು ಸದ್ಯಕ್ಕಂತೂ ಅಲಭ್ಯವಾಗಿವೆ. ಹಾಗಾಗಿ, ವಿಶೇಷ ಸಮಗ್ರ ಪರಿಷ್ಕರಣೆಯ ಹೆಸರಿನಲ್ಲಿ ಪೌರತ್ವ ದಾಖಲೆ ಕೇಳುವ ಕ್ರಮವನ್ನು ನಾವು ವಿರೋಧಿಸಬೇಕು. ಇಷ್ಟು ಕಾಲ ನಡೆದುಕೊಂಡು ಬಂದಂತೆ ಮನೆಮನೆ ಗಣತಿಯ ಮೂಲಕ ಹೆಸರುಗಳನ್ನು ಸೇರಿಸುವ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಬೇಕು. ದೋಷರಹಿತವಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಪಾರದರ್ಶಕ ಪ್ರಕ್ರಿಯೆಯ ಮೇಲೆಯೇ ಬಂಡವಾಳಶಾಹಿ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯು ನಿಂತಿರುವಾಗ, ಇವೆರಡೂ ಇಲ್ಲದಿರುವ ನಮ್ಮ ದೇಶದ ಇವತ್ತಿನ ಸಂದರ್ಭದಲ್ಲಿ ಆಡಳಿತಾರೂಢರು ಕೇವಲ ಭ್ರಮೆಯನ್ನು ಸೃಷ್ಟಿಸಿ ತಮ್ಮ ವಿರುದ್ಧ ಇರುವವರನ್ನು ಎಸ್‌ಐಆರ್ ಬಳಸಿಕೊಂಡು ಪಕ್ಕಕ್ಕೆ ತಳ್ಳಿ ತಮ್ಮ ಜನವಿರೋಧಿ ಆಡಳಿತವನ್ನು ಮುಂದುವರೆಸಿಕೊಂಡು ಹೋಗುವ ಹುನ್ನಾರ ನಡೆಸುತ್ತಿದ್ದಾರಲ್ಲದೇ ಇನ್ನೇನು ಎನ್ನುವ ಮಾತು ಸುಳ್ಳೇ?
1944ರ ಮೇ ತಿಂಗಳಲ್ಲಿ ಫ್ಯಾಸಿವಾದಿ ಜರ್ಮನಿಯು ವಿಶ್ವದ ಚೊಚ್ಚಲ ಸಮಾಜವಾದಿ ರಾಷ್ಟ್ರ ಸೋವಿಯತ್ ಒಕ್ಕೂಟದ ಮೇಲೆ ಸಾಮ್ರಾಜ್ಯವಾದದ ಪರವಾಗಿ ಅತ್ಯಂತ ಅಮಾನವೀಯ ದುರಾಕ್ರಮಣವನ್ನು ನಡೆಸುತ್ತಿತ್ತು. ಸೋವಿಯತ್ ಒಕ್ಕೂಟದ ದುಡಿಯುವ ಜನತೆ ತಮ್ಮ ಮಾತೃಭೂಮಿಯನ್ನು ಫ್ಯಾಸಿವಾದಿಗಳಿಂದ ಸಂರಕ್ಷಿಸಿಕೊಳ್ಳಲು ಮತ್ತು ಮನುಕುಲವನ್ನು ಫ್ಯಾಸಿವಾದದಿಂದ ಮುಕ್ತಗೊಳಿಸಲು ಜೀವ ತೆತ್ತು ಮಹಾನ್ ಸ್ಟಾಲಿನ್‌ರ ನಾಯಕತ್ವದಲ್ಲಿ ಮಹಾ ರಾಷ್ಟ್ರಾಭಿಮಾನಿ ಸಮರವನ್ನು ನಡೆಸುತ್ತಿದ್ದರು. ಪ್ರತಿಯೊಬ್ಬ ಸೋವಿಯತ್ ನಾಗರಿಕನೂ ಯೋಧನಾಗಿದ್ದನು. ಯುವಕ-ಯುವತಿಯರು ಜೀವದ ಹಂಗು ತೊರೆದು ತಮ್ಮ ನೆಲವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದರು. ಯುದ್ಧವು ಪರಾಕಾಷ್ಠೆಯನ್ನು ಮುಟ್ಟಿತ್ತು. ಫ್ಯಾಸಿಸ್ಟರು ಮಾಸ್ಕೊದ ಸಮೀಪ ಬಂದು ತಲುಪಿದ್ದರು. ಅಲ್ಲಿಂದ ಸೋವಿಯತ್ ಪ್ರತಿದಾಳಿಯು ಮೇಲುಗೈಯನ್ನು ಸಾಧಿಸಲು ಆರಂಭಿಸಿತ್ತು. ಇಂತಹ ಘನಘೋರ ಸನ್ನಿವೇಶದಲ್ಲಿ ಮೇ ದಿನದಂದು ಕಾಮ್ರೇಡ್ ಸ್ಟಾಲಿನ್ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಇಂದಿನ ಯುದ್ಧದ ವಾತಾವರಣದಲ್ಲಿ ಆಗಮಿಸಿರುವ ಮೇ ದಿನದ ಸಂದರ್ಭದಲ್ಲಿ ಈ ಲೇಖನ ಅತ್ಯಂತ ಸೂಕ್ತವಾದುದೆಂದು ಸ್ಟಾಲಿನ್‌ರ ಆ ಭಾಷಣದ ಅನುವಾದವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. - ಸಂ.
ಸೂಡಾನ್‌ನಲ್ಲಿ ವಿಭಿನ್ನ ಜನಾಂಗಗಳ ಮಧ್ಯೆ ಗಲಭೆ ಸೃಷ್ಟಿಸಿದ ಸಾಮ್ರಾಜ್ಯಶಾಹಿಗಳು ಸೂಡಾನ್‌ನಲ್ಲಿ ವಿಭಿನ್ನ ಜನಾಂಗಗಳ ಮಧ್ಯೆ ಗಲಭೆ ಸೃಷ್ಟಿಸಿದ ಸಾಮ್ರಾಜ್ಯಶಾಹಿಗಳು ಹೇರಳ ತೈಲ ನಿಕ್ಷೇಪ, ನೈಸರ್ಗಿಕ...
ಮಹಿಳಾ ಮತಾಧಿಕಾರ ಪುರುಷರಿಗೇ ಏಕೆ ಅವಶ್ಯಕ ಮಹಿಳಾ ಮತಾಧಿಕಾರ ಪುರುಷರಿಗೇ ಏಕೆ ಅವಶ್ಯಕ (ಅನೇಕ ತರಹದ ದೈಹಿಕ ನ್ಯೂನತೆಗಳನ್ನು ಮೀರಿ ಸಮಾಜವಾದಕ್ಕಾಗಿ ಹೋರಾಡಿದ ಮಹಾನ್ ಚೇತನ ಹೆಲೆನ್ ಕೆಲರ್ ಅವರ ಈ...
ರಾಜ್ಯ ಬಜೆಟ್: ಹುಸಿ ನಿರೀಕ್ಷೆಗಳ ಭ್ರಮೆ ಸೃಷ್ಟಿ ರಾಜ್ಯ ಬಜೆಟ್: ಹುಸಿ ನಿರೀಕ್ಷೆಗಳ ಭ್ರಮೆ ಸೃಷ್ಟಿ ಮುಖ್ಯವಾಹಿನಿ ಮಾಧ್ಯಮಗಳು ಬಣ್ಣಿಸಿರುವಂತೆ ದಾಖಲೆಯ ಸತತ 17ನೇ ರಾಜ್ಯ ಬಜೆಟ್ಟನ್ನು ರಾಜ್ಯದ...
ವಿಬಿ ಜಿ ರಾಮ್ ಜಿ ಕಾಯ್ದೆ – ಗ್ರಾಮೀಣ ಜನರಿಗೆ ಉದ್ಯೋಗ ಖಾತರಿ ಖೋತಾ ವಿಬಿ ಜಿ ರಾಮ್ ಜಿ ಕಾಯ್ದೆ – ಗ್ರಾಮೀಣ ಜನರಿಗೆ ಉದ್ಯೋಗ ಖಾತರಿ ಖೋತಾ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ...
ಶಾಲೆ ತೊರೆಯುತ್ತಿರುವ ಮಕ್ಕಳ ಹೃದಯ ವಿದ್ರಾವಕ ಚಿತ್ರಣ ಶಾಲೆ ತೊರೆಯುತ್ತಿರುವ ಮಕ್ಕಳ ಹೃದಯ ವಿದ್ರಾವಕ ಚಿತ್ರಣ 2015ಕ್ಕೆ ಅರೆಕ್ಷಣ ಹಿಂದಿರುಗೋಣ. ಆಗ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದು...
‘ಶಾಂತಿ’ ಕಾಯ್ದೆ 2025-ಯಾರ ಹಿತಕ್ಕಾಗಿ? ‘ಶಾಂತಿ’ ಕಾಯ್ದೆ 2025-ಯಾರ ಹಿತಕ್ಕಾಗಿ? ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ವಿವಿಧ ಯೋಜನೆಗಳಿಗೆ ಸುಂದರವಾದ ಪದಪುಂಜಗಳ ಮೂಲಕ ನಾಮಕರಣ ಮಾಡುವುದರಲ್ಲಿ...
ಕೇಂದ್ರ ಬಜೆಟ್ 2026: ಕಾರ್ಪೊರೇಟ್ ಕುಳಗಳಿಗಾಗಿ ಸಂಕಲ್ಪ – ಜನಸಾಮಾನ್ಯರಿಗೆ ಸಂಕಷ್ಟ ಕೇಂದ್ರ ಬಜೆಟ್ 2026: ಕಾರ್ಪೊರೇಟ್ ಕುಳಗಳಿಗಾಗಿ ಸಂಕಲ್ಪ – ಜನಸಾಮಾನ್ಯರಿಗೆ ಸಂಕಷ್ಟ ಬಿಜೆಪಿ ನೇತೃತ್ವದ...
ಪಶ್ಚಿಮ ಬಂಗಾಲದ ಮಂದಿರ-ಮಸೀದಿ ರಾಜಕೀಯ ಪಶ್ಚಿಮ ಬಂಗಾಲದ ಮಂದಿರ-ಮಸೀದಿ ರಾಜಕೀಯ 1947ರ ದೇಶ ವಿಭಜನೆಗೂ ಮುನ್ನ ಇಂದಿನ ಪಶ್ಚಿಮ ಬಂಗಾಲ ಮತ್ತು ಬಾಂಗ್ಲಾದೇಶ ಒಗ್ಗೂಡಿ ಒಂದೇ ರಾಜ್ಯವಾಗಿತ್ತು....
ಇಂದೋರ್ : `ಸ್ವಚ್ಛ ನಗರ’ದ ಅಡಿಯಲ್ಲಿ ಪ್ರಾಣಾಂತಿಕ ‘ಜಲ’ಧಾರೆ! ಮಧ್ಯಪ್ರದೇಶದ ಇಂದೋರ್‌ನ ಭಾರತದ ಅತ್ಯಂತ `ಸ್ವಚ್ಛ ನಗರ’ ಎಂಬ ಖ್ಯಾತಿ, ಇತ್ತೀಚೆಗೆ ಹದಗೆಟ್ಟ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಿಂದ...
ಭಾರತೀಯ ರೈಲ್ವೆ: ಕಾರ್ಪೊರೇಟ್ ಲೂಟಿಯ ಬಲಿಪಶು! ಕೆಲಸ ಹುಡುಕುತ್ತ ದೊಡ್ಡ ನಗರಕ್ಕೆ ತೆರಳುವ ವಲಸೆ ಕಾರ್ಮಿಕ, ತನ್ನ ಕಷ್ಟಾರ್ಜಿತ ಉಳಿತಾಯದೊಂದಿಗೆ ತೀರ್ಥಯಾತ್ರೆಗೆ ಸಜ್ಜಾದ ಒಬ್ಬ ವಯಸ್ಸಾದ ಭಕ್ತ,...
ಸಭಾಪತಿಗಳ ಸಭಾತ್ಯಾಗವೆಂಬೋ ಪ್ರಹಸನ! ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಸಚಿವರು ಮತ್ತು ಅಧಿಕಾರಿಗಳ ಬೇಜವಾಬ್ದಾರಿ, ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದಿರುವುದು ಹಾಗೂ ಕಲಾಪಕ್ಕೆ...
ಚಿನ್ನದ ಬೆಲೆ ಏರುತ್ತಿರುವುದೇಕೆ? – ಒಂದು ವಿಶ್ಲೇಷಣೆ ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯು ಹಿಂದೆಂದೂ ಕಾಣದ ಮಟ್ಟದ ಏರಿಕೆಯನ್ನು ಕಾಣುತ್ತಿದೆ. 2025ರ ಸಾಲಿನಲ್ಲಿಯೇ...
ರಾಯಚೂರು, ಎಐಕೆಕೆಎಂಎಸ್: ದಕ್ಷಿಣ ಭಾರತ ಅಧ್ಯಯನ ಶಿಬಿರ ಚರ್ಚೆ: ಕೃಷಿ ಕ್ಷೇತ್ರದಲ್ಲಿ ಬಂಡವಾಳಶಾಹಿ ಆರ್ಥಿಕತೆಯ ಉಗಮ “ಇಂದು ಒಂದಾದ ಮೇಲೊಂದು ರೈತ-ಕೃಷಿ ವಿರೋಧಿ ನೀತಿಗಳನ್ನು ಕೇಂದ್ರ ಬಿಜೆಪಿ...
ನಾವೇಕೆ ಮಾರ್ಕ್ಸ್ ವಾದವನ್ನು ಕಲಿಯಬೇಕು ನಾವು ಯಾವುದೇ ತತ್ವ ಅಥವಾ ಸಿದ್ಧಾಂತಗಳಿಗೆ ಅಂಟಿಕೊಳ್ಳುವುದಿಲ್ಲ ಎಂಬ ಅಪ್ಪಟ ಬುದ್ಧಿಜೀವಿಗಳ ಒಂದು ವಾದವಿದೆ. ಆದರೆ ಅದು ವಾಸ್ತವವೇ? ಹಾಗಿರಲು ಸಾಧ್ಯವೇ?...
ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ 2026: ವಿಶ್ವದ ಎದುರು ಭಾರತ ನಗೆಪಾಟಲು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ‘ಇಂಡಿಯಾ AI ಮಿಷನ್’ ಅಡಿಯಲ್ಲಿ, ಕಳೆದ ಫೆ. 16ರಿಂದ 21...
28-29, ಜನವರಿ, 2026: ಶ್ರೀಲಂಕಾ: ದಕ್ಷಿಣ ಏಷ್ಯಾ ಎಡಪಂಥೀಯ ವಿದ್ಯಾರ್ಥಿಗಳ ಯಶಸ್ವಿ ಸಮಾವೇಶ ಐಕ್ಯ ಹೋರಾಟದ ಸಂಕಲ್ಪ! ಕಳೆದ ಜನವರಿ 28 ರಿಂದ 30 ರವರೆಗೆ ಶ್ರೀಲಂಕಾದ ಕೊಲೊಂಬೊದಲ್ಲಿ AIDSO...
ದೇಶದಲ್ಲಿ ಉನ್ನತ ಶಿಕ್ಷಣದ ಉಸಿರುಗಟ್ಟಿಸಲಾಗುತ್ತಿದೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮೋದಿ ಸರ್ಕಾರವು ‘ವಿಕಸಿತ ಭಾರತ್ ಶಿಕ್ಷಾ ಅಧಿಷ್ಠಾನ್ ಮಸೂದೆ’ಯನ್ನು ಮಂಡಿಸಿದೆ. ದೇಶದಲ್ಲಿ ಉನ್ನತ...
ಕೇರಳ ತೀವ್ರ ಬಡತನ ಮುಕ್ತ ರಾಜ್ಯ’ – ಸಿಪಿಐ (ಎಂ) ಸರ್ಕಾರದ ಸುಳ್ಳು ಘೋಷಣೆ ‘ಕೇರಳ ತೀವ್ರ ಬಡತನ ಮುಕ್ತ ರಾಜ್ಯ’ – ಸಿಪಿಐ (ಎಂ) ಸರ್ಕಾರದ ಸುಳ್ಳು ಘೋಷಣೆಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರವು...
ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ – ನಯವಂಚಕ ಪ್ರಸ್ತಾವನೆ ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ – ನಯವಂಚಕ ಪ್ರಸ್ತಾವನೆರೈತರಿಗಿಲ್ಲ ಧನ, ಗ್ರಾಹಕರಿಗಿಲ್ಲ ಧಾನ್ಯ, ಕಾರ್ಪೊರೇಟ್...
ಅರಾವಳಿ ಬೆಟ್ಟದ ಸಾಲು ಇದೀಗ ಲಾಭಕೋರರ ಪಾಲು ಇತ್ತೀಚಿಗೆ ಸುಪ್ರೀಂ ಕೋರ್ಟ್ (ನವೆಂಬರ್ 29,2025) ಅರಾವಳಿ ಬೆಟ್ಟದ ಸಾಲುಇದೀಗ ಲಾಭಕೋರರ ಪಾಲುಇತ್ತೀಚಿಗೆ ಸುಪ್ರೀಂ ಕೋರ್ಟ್ (ನವೆಂಬರ್ 29,2025)...
ವೆನೆಜುವೆಲಾದ ಮೇಲೆ ಅಮೆರಿಕಾದ ‘ಟ್ರಂಪ್’ ಕಾರ್ಡ್ ಅಮೆರಿಕಾದ ಹಿತಾಸಕ್ತಿ ಮಾತ್ರವೇ ಸತ್ಯ, ಬೇರೆಲ್ಲ ಮಿಥ್ಯ ಕಳೆದ ಕೆಲವು ವಾರಗಳಲ್ಲಿ ಜಗತ್ತಿನಲ್ಲಿ ಹಲವಾರು ಕ್ಷಿಪ್ರಗತಿಯ ಬೆಳವಣಿಗೆಗಳು...
ನೇತಾಜಿ ಸುಭಾಷ್‌ಚಂದ್ರ ಬೋಸ್ ಜನ್ಮದಿನ: 23 ಜನವರಿ 2026 ನೇತಾಜಿ ಸುಭಾಷ್‌ಚಂದ್ರ ಬೋಸ್ ಜನ್ಮದಿನ: 23 ಜನವರಿ 2026ಅವರ ಕೃತಿ ‘ಕ್ರಾಸ್‌ರೋಡ್ಸ್’ನಿಂದ ಕೆಲವು ಉಲ್ಲೇಖಗಳುಸ್ವಾತಂತ್ರ್ಯ ಮತ್ತು...
ಭರವಸೆ ಮಂಕಾಗಿದೆ – ನಿಟ್ಟುಸಿರೇ ಬದುಕಾಗಿದೆ: ಇನ್ನು ಹೊಸ ವರುಷದ ಸಂಭ್ರಮವೆಂತು? ಕಳೆದೊಂದು ಮಾಸದಲ್ಲಿ ಏನೆಲ್ಲಾ ನಡೆದು ಹೋಗಿದೆ. ನಮ್ಮ ರಾಜ್ಯದಲ್ಲಿ ಒಂದು ಜವಾಬ್ದಾರಿಯುತ ಸರ್ಕಾರವು ಇದೆಯೇ...
ಇಂಡಿಗೋ ಬಿಕ್ಕಟ್ಟು: ಖಾಸಗೀಕರಣದ ಸೃಷ್ಟಿ ದೇಶದ ವಿಮಾನ ಸಂಚಾರ ವ್ಯವಸ್ಥೆಯಲ್ಲಿ ಹಿಂದೆಂದೂ ಕಂಡರಿಯದ ಅತಿದೊಡ್ಡ ಬಿಕ್ಕಟ್ಟು 2025ರ ಡಿಸೆಂಬರ್ ತಿಂಗಳಲ್ಲಿ ಕಾಣಿಸಿಕೊಂಡಿತು. ಡಿಸೆಂಬರ್ 5ರಂದು...
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ 2025 ದ್ವೇಷ ತಡೆಗಟ್ಟಲು ಇನ್ನೊಂದು ಕಾನೂನು ಅನಿವಾರ್ಯವೇ? ರಾಜ್ಯ ವಿಧಾನ ಮಂಡಲದ 2025ರ ಚಳಿಗಾಲದ ಅಧಿವೇಶನದಲ್ಲಿ ‘ಕರ್ನಾಟಕ...
ಗಾಜಾ಼: ಸಾಮ್ರಾಜ್ಯವಾದ ಸೃಷ್ಟಿಸಿದ ಹಸಿವು-ಕ್ಷಾಮಗಳೇ ಇಲ್ಲಿ ನಿಜವಾದ ಯುದ್ಧ. ಗಾಜಾಪಟ್ಟಿಯ ಮೇಲೆ ಇಸ್ರೇಲಿನ ಯುದ್ಧ ಮುಂದುವರೆದಿದೆ. ಈಗಾಗಲೇ ಸಾವಿರಾರು ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಜನರಿಗೆ...
ಇಂದಿನ ವೃತ್ತಿ ಶಿಕ್ಷಣವು ಅಗ್ಗದ ಕಾರ್ಮಿಕರನ್ನು ಸೃಷ್ಟಿಸುತ್ತಿದೆ ಅಷ್ಟೇ! ಕರ್ನಾಟಕದಲ್ಲಿ ತೆರೆಯಲಾಗುತ್ತಿರುವ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಲ್ಲಿ 6ನೇ ತರಗತಿಯಿಂದಲೇ ವೃತ್ತಿಶಿಕ್ಷಣವನ್ನು...
ನಿಜವಾದ ದೇಶಪ್ರೇಮ, ನಿಜವಾದ ರಾಷ್ಟ್ರವಾದ ಅಂದರೆ ಏನು? ಭಾಗ-02[ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರ್‌ಎಸ್‌ಎಸ್, ಹಿಂದೂ ಮಹಾಸಭಾಗಳ ಪಾತ್ರ ಹಾಗೂ ಅವುಗಳ ಮುಖಂಡರಾಗಿದ್ದ ಡಾ:ಶಾಮಪ್ರಸಾದ್...
ಯಾವುದು ನಿಜವಾದ ದೇಶಪ್ರೇಮ, ಯಾವುದು ನಿಜವಾದ ರಾಷ್ಟ್ರವಾದ ಭಾಗ-1 ಯಾವುದೇ ದೇಶ ಅಭಿವೃದ್ಧಿಯಾಗಬೇಕೆಂದರೆ, ಪ್ರಗತಿಯ ಕಡೆಗೆ ಹೆಜ್ಜೆ ಹಾಕಬೇಕೆಂದರೆ, ಮುನ್ನಡೆಯನ್ನು ಸಾಧಿಸಬೇಕೆಂದರೆ, ಆ ದೇಶದ...
ಯುದ್ಧ: ಜನರ ಸಮಾಧಿ ಮೇಲೆ ‘ಬೆಳೆಯುತ್ತಿರುವ ಉದ್ಯಮ’ ಪ್ಯಾಲೇಸ್ತೇನ್‌ನ ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಯುದ್ಧ ದಾಳಿ, ಸಾವಿರಾರು ಮಕ್ಕಳನ್ನು ಒಳಗೊಂಡ 60,000 ಮುಗ್ಧ ಜನರ ಕಗ್ಗೊಲೆ ಇಡೀ...
ಜಿಮ್ಮರ್‌ವಾಲ್ಡ್ ಸಮ್ಮೇಳನದಲ್ಲಿ ಎಸ್‌ಯುಸಿಐ(ಸಿ) ಭಾಗಿ 1914ರಲ್ಲಿ ಸಾಮ್ರಾಜ್ಯಶಾಹಿಗಳ ಮೊದಲನೆಯ ಮಹಾಯುದ್ಧ ಪ್ರಾರಂಭವಾದಾಗ ಎರಡನೇ ಇಂಟರ್‌ನ್ಯಾಷನಲ್ (ಕಮ್ಯುನಿಸ್ಟ್ ಪಕ್ಷಗಳ ಅಂತರರಾಷ್ಟ್ರೀಯ...
350ವರ್ಷದ ಬಂಡವಾಳವಾದ V/s 30 ವರ್ಷದ ಸಮಾಜವಾದ 350 ವರ್ಷಗಳಲ್ಲಿ ಬಂಡವಾಳವಾದ ಸಾಧಿಸಲಾಗದ್ದನ್ನು ಸಮಾಜವಾದಿ ಸೋವಿಯತ್ ಒಕ್ಕೂಟ ಕೇವಲ 30 ವರ್ಷಗಳಲ್ಲಿ ಸಾಧಿಸಿದ್ದು ಹೇಗೆ? ಸುಮಾರು 25 ವರ್ಷಗಳ...
38 ದಶಲಕ್ಷ ಜನರ ಮಾರಣ ಹೋಮಕ್ಕೆ ಕಾರಣವಾದ ಆರ್ಥಿಕ ದಿಗ್ಬಂಧನಗಳು ಇಲ್ಲಿ ಸತ್ತವರ ಸುದ್ದಿಗಳು ರಾತ್ರಿ ಬಿತ್ತರಗೊಳ್ಳುವ ಸುದ್ದಿವಾಹಿನಿಗಳಲ್ಲಿ ಕಾಣಿಸುವುದಿಲ್ಲ. ಇವರ ಹೆಸರುಗಳನ್ನು ಸ್ಮಾರಕದ...
ಹಿಟ್ಲರನ ಫ್ಯಾಸೀವಾದವನ್ನು ಸೋಲಿಸಿದ ವಿಜಯಕ್ಕೆ ಈಗ 80 ವರ್ಷ ಸೋವಿಯತ್ ಒಕ್ಕೂಟದ ವಿಜಯಕ್ಕೆ ಸ್ಟಾಲಿನ್‌ರ ಅಮೋಘ ನಾಯಕತ್ವವೇ ಕಾರಣ ಭಾಗ-3 (1945ರ ಮೇ 2ರಂದು ಸೋವಿಯತ್ ಒಕ್ಕೂಟದ ಕೆಂಪು ಸೈನ್ಯವು...
ಶೋಷಣಾಮುಕ್ತ ಸಮಾಜ ಸ್ಥಾಪಿಸಿದ ಮಹಾನ್ ನವೆಂಬರ್ ಕ್ರಾಂತಿ ಚಿರಾಯುವಾಗಲಿ! (1917 ರ ನವೆಂಬರ್ 7ರಿಂದ 17ರವರೆಗೆ ರಷ್ಯಾದಲ್ಲಿ ಜರುಗಿದ ನವೆಂಬರ್ ಮಹಾಕ್ರಾಂತಿಯ ನೆನಪಿನಲ್ಲಿ 1970ರ ನವೆಂಬರ್‌ನಲ್ಲಿ...
ನೇಪಾಳದಲ್ಲಿನ ಜೆನ್-ಝೀ ಬಂಡಾಯ ಮೂರು ಡಜನ್‌ಗಿಂತಲೂ ಹೆಚ್ಚು ಯುವಕರು ಮತ್ತು ವಿದ್ಯಾರ್ಥಿಗಳ ಬಲಿದಾನದೊಂದಿಗೆ ನಡೆದ ರಕ್ತಸಿಕ್ತವಾದ ‘ಜೆನ್-ಝೀ’ ಚಳುವಳಿ, (1995 ರಿಂದ 2000 ರ ನಡುವೆ ಜನಿಸಿದ ಯುವ...
ಗಿಗ್ ಆರ್ಥಿಕತೆ ಬಂಡವಾಳಶಾಹಿ ವ್ಯವಸ್ಥೆಯ ಹೊಸ ವೇತನ ಗುಲಾಮಗಿರಿ! ಇವತ್ತಿನ ಪ್ರಪಂಚದಲ್ಲಿ, ಶಾಶ್ವತ ಉದ್ಯೋಗ, ಕೆಲಸದ ಭದ್ರತೆ, ಸಮಯಕ್ಕೆ ಸರಿಯಾಗಿ ಸಂಬಳ, ದಿನಕ್ಕೆ 8 ಗಂಟೆಗಳ ಕೆಲಸ, ಆರೋಗ್ಯ...
ಹಿಟ್ಲರನ ಫ್ಯಾಸೀವಾದವನ್ನು ಸೋಲಿಸಿದ ವಿಜಯಕ್ಕೆ ಈಗ 80 ವರ್ಷ ಮಾನವಕುಲವನ್ನು ರಕ್ಷಿಸಿದ ಮಹಾನ್ ನಾಯಕ ಸ್ಟಾಲಿನ್! ಭಾಗ-02 (1945ರ ಮೇ 2ರಂದು ಸೋವಿಯತ್ ಒಕ್ಕೂಟದ ಕೆಂಪು ಸೈನ್ಯವು ರಾಜಧಾನಿ...
ಬಾಲ್ಯದಲ್ಲೇ ಮಕ್ಕಳಿಗೆ ಮಿಲಿಟರಿ ತರಬೇತಿ ಮಹಾರಾಷ್ಟ್ರ ಸರ್ಕಾರದ ಅಪಾಯಕಾರಿ ಯೋಜನೆ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ದೈಹಿಕ...
ಅಮೆರಿಕಾದ ಮನೆಬಾಗಿಲಿಗೇ ಬಂದ ಟ್ರಂಪ್ ಯುದ್ಧ ಯುದ್ಧ ಭೂಮಿಯಲ್ಲಿ ಶತ್ರು ದೇಶಗಳೊಂದಿಗೆ ಹೋರಾಡಬೇಕಿದ್ದ ಅಮೆರಿಕದ ಸೇನಾಪಡೆಯ ತುಕಡಿಗಳು ಕಳೆದ ಜೂನ್ 10ರಂದು ಲಾಸ್ ಏಂಜೆಲಿಸ್‌ನ ಬೀದಿಗಳಲ್ಲಿ...
ಪ್ರವಾಹ ಪೀಡಿತ ಕಲಬುರ್ಗಿ ಜಿಲ್ಲೆಯನ್ನು ಹಸಿಬರ ಜಿಲ್ಲೆಯೆಂದು ಘೋಷಿಸಬೇಕು, ಎಕರೆಗೆ 25,000 ರೂ. ಬೆಳೆ ಪರಿಹಾರ ನೀಡಬೇಕು, ಹಾನಿಯಾದ ಮನೆಗಳನ್ನು ಹೊಸದಾಗಿ ನಿರ್ಮಿಸಬೇಕು, ರೈತರ ಸಾಲ ಮನ್ನಾ...
ಬ್ಯಾಂಕ್ ಬಡ್ಡಿದರ ಕಡಿತ: ಬಂಡವಾಳಿಗರ ಕಣ್ಣಿಗೆ ಬೆಣ್ಣೆ-ಜನ ಸಾಮಾನ್ಯರ ಕಣ್ಣಿಗೆ ಸುಣ್ಣ! ಜೂನ್ 6, 2025ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ತನ್ನ ಪ್ರಮುಖ ಬಡ್ಡಿ ದರವನ್ನು ಶೇ. 0.5ರಷ್ಟು...
ಅಸ್ಸಾಂ: ರಾಕ್ಷಸೀ ತೆರವು ಕಾರ್ಯಾಚರಣೆ ಮತ್ತು ಕೊಲೆಗಳು ಸರ್ಕಾರದ ಫ್ಯಾಸೀವಾದಿ ನಡೆಯನ್ನು ವಿರೋಧಿಸಿ! ಅತಿಕ್ರಮಣಗೊಂಡ ಭೂಮಿಯನ್ನು ವಶಪಡಿಸಿಕೊಳ್ಳುವ ನೆಪದಲ್ಲಿ, ಬಿಜೆಪಿ ನೇತೃತ್ವದ ಅಸ್ಸಾಂ...
ಆರ್ಥಿಕತೆಯ ಮಿಲಿಟರೀಕರಣ ಮತ್ತು ಸಾಮ್ರಾಜ್ಯಶಾಹಿ ಯುದ್ಧ ಕಾಮ್ರೇಡ್ ಶಿವದಾಸ್ ಘೋಷ್ ವ್ಯಾಖ್ಯಾನ ಅಮೆರಿಕಾದ ಆರ್ಥಿಕತೆಯು ಒಂದು ಬಂಡವಾಳಶಾಹಿ ಆರ್ಥಿಕತೆಯಾಗಿದ್ದು, ಹೆಚ್ಚುವರಿ ಬಂಡವಾಳದ ಸಮಸ್ಯೆಯೇ...
ಗುಜರಾತ್ – ಬಿಹಾರ: ಕುಸಿದ ಸೇತುವೆಗಳು ಹೊಣೆ ಯಾರದ್ದು? 2025ರ ಜುಲೈ 9 ರಂದು ಮುಂಜಾನೆ 7.30 ರ ಸುಮಾರಿಗೆ ವಡೋದರಾ ಜಿಲ್ಲೆಯ ಮುಜ್ಪುರ್‌ನಿಂದ ಆನಂದ್ ಜಿಲ್ಲೆಯ ಗಂಭೀರಾವನ್ನು ಸಂಪರ್ಕಿಸುವ ಒಂದು...
ಎಐಡಿಎಸ್‌ಓ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟಕ್ಕೆ ಜಯ! ಅತಿಥಿ ಉಪನ್ಯಾಸಕರ ನೇಮಕಾತಿಗೆ ಅಸ್ತು । ಶೈಕ್ಷಣಿಕ ಅವಧಿ ವಿಸ್ತರಣೆ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ರಾಜ್ಯ ಸರ್ಕಾರದ ವಿಳಂಬ...
ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜನರಿಗೆ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಸ್‌ಯುಸಿಐ (ಸಿ) ಒತ್ತಾಯ ಪತ್ರಿಕಾ ಹೇಳಿಕೆ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜನರಿಗೆ ತಕ್ಷಣ ಪರಿಹಾರ...
ಇತಿಹಾಸ ಪಠ್ಯಪುಸ್ತಕದಿಂದ ಮೊಘಲ್ ಕಾಲಕ್ಕೆ ಖೊಕ್! ಹಿಂದುತ್ವ ಬ್ರಿಗೇಡ್‌ನ ಹೇಯ ಪಿತೂರಿ!! ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಶಿಫಾರಸ್ಸುಗಳನ್ನು...
ಎಪಿಎಲ್ ಕಾರ್ಡುದಾರರಿಗೆ ಆಸ್ಪತ್ರೆಗಳಲ್ಲಿ ಶುಲ್ಕ ವಿಧಿಸುವ ಕ್ರಮಕ್ಕೆ ಎಸ್‌ಯುಸಿಐ(ಸಿ) ಖಂಡನೆ ಪತ್ರಿಕಾ ಹೇಳಿಕೆ ಎಪಿಎಲ್ ಕಾರ್ಡುದಾರರಿಗೆ ಆಸ್ಪತ್ರೆಗಳಲ್ಲಿ ಶುಲ್ಕ ವಿಧಿಸುವ ಕ್ರಮಕ್ಕೆ...
5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕರಾಳ ಮುಖ ನೀತಿ ಆಯೋಗದ ಮುಖ್ಯಸ್ಥರು ಐಎಂಎಫ್‌ನ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜುಗಳನ್ನು ಉಲ್ಲೇಖಿಸಿ, ಭಾರತವು ಈಗಾಗಲೇ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ...
ಕೃತಕ ಬುದ್ಧಿಮತ್ತೆಯ ಸವಾಲುಗಳು ಇತ್ತೀಚಿನ ದಿನಗಳಲ್ಲಿ ಎಐ, ಅಂದರೆ ಕೃತಕ ಬುದ್ಧಿಮತ್ತೆಯ ಬಗ್ಗೆ ವ್ಯಾಪಕ ಚರ್ಚೆಗಳೆದ್ದಿವೆ. ಈ ಹೊಸ ತಂತ್ರಜ್ಞಾನವು ಕ್ರಾಂತಿಕಾರಕ ರೀತಿಯಲ್ಲಿ ಭಿನ್ನ...
ಫ್ಯಾಸೀವಾದ: ಅಂದು-ಇಂದು (1962, ಜೂನ್‌ನಲ್ಲಿ ಪ್ರಕಟವಾದ, ಶಿವದಾಸ್ ಘೋಷ್‌ರವರ ‘ಘಳಿಗೆಯ ಕರೆ’ ಕೃತಿಯಿಂದ, ಇಂದಿಗೂ ಪ್ರಸ್ತುತವಾದ ‘ಫ್ಯಾಸೀವಾದ’ದ ಕುರಿತಾದ ಕೆಲ ಅಂಶಗಳನ್ನು ನಿಮ್ಮ ಮುಂದೆ...
ಗಾಜಾದಲ್ಲಿ ನಡೆಯುತ್ತಿರುವುದು ಭೀಕರ ನರಮೇಧ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಲೇಖನಕ್ಕೊಂದು ಪ್ರತ್ಯುತ್ತರ ಅಮೇರಿಕಾದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ಜುಲೈ 4 ರಂದು “ಗಾಜಾ ಮೇಲೆ ಇಸ್ರೇಲ್...
ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ಕಡ್ಡಾಯವಲ್ಲ” ಸರ್ವೋಚ್ಛ ನ್ಯಾಯಾಲಯ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಜಾರಿಗೆ ತರಲು ಯಾವುದೇ ರಾಜ್ಯವನ್ನು ಕೇಂದ್ರವು ಬಲವಂತಪಡಿಸುವಂತಿಲ್ಲ ಎಂದು 2024ರ ಮೇ...
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಸಂಪೂರ್ಣ ಯಶಸ್ವಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ಬಂಡವಾಳಶಾಹಿ ಪರ ನೀತಿಗಳಿಗೆ ಕಾರ್ಮಿಕರ ಧಿಕ್ಕಾರ! ಜುಲೈ ೯ರಂದು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಅಖಿಲ...
ಎಸ್‌ಯುಸಿಐ(ಸಿ) ಕಾರ್ಯಕರ್ತರ ಬೆಳವಣಿಗೆಗೆ ಪ್ರೇರಣೆಯಾದ ದಕ್ಷಿಣ ಭಾರತ ಅಧ್ಯಯನ ಶಿಬಿರ ಎಸ್‌ಯುಸಿಐ (ಸಿ) ಪಕ್ಷ ಮೈಸೂರಿನಲ್ಲಿ ಜುಲೈ ೧೮ ರಿಂದ ೨೧ ರವರೆಗೆ ಸಂಘಟಿಸಿದ್ದ ಅಧ್ಯಯನ ಶಿಬಿರದಲ್ಲಿ...
ಜಾಗತಿಕ ಪ್ರತಿಭಟನೆ: ಯುದ್ಧವನ್ನು ನಿಲ್ಲಿಸಲು ಅಮೇರಿಕ-ಇಸ್ರೇಲ್ ಮೇಲೆ ಒತ್ತಡ ಅಮೇರಿಕ ಮತ್ತು ಇಸ್ರೇಲ್ ನಾಗರಿಕರು ಸೇರಿದಂತೆ ವಿಶ್ವದಾದ್ಯಂತ ಯುದ್ಧ ವಿರೋಧಿ, ಶಾಂತಿ ಪ್ರಿಯ ಜನರು ಅಮೇರಿಕನ್...
ದೇವನಹಳ್ಳಿ ರೈತರ ಸುದೀರ್ಘ ಹೋರಾಟಕ್ಕೆ ಸಿಕ್ಕ ಜಯ ಭೂಸ್ವಾಧೀನ ಪ್ರಕ್ರಿಯೆ ಹಿಂದಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ರೈತರು ಮಹತ್ವ ಪೂರ್ಣ ವಿಜಯವನ್ನು ಸಾಧಿಸಿದ್ದಾರೆ....
ವಿಶೇಷ ಮತದಾರರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಮತದಾನದ ಹಕ್ಕನ್ನು ಕಸಿಯುವುದನ್ನು ನಿಲ್ಲಿಸಿ! ವಂಚನೆ, ತಿರುಚುವಿಕೆ ಬೇಡವೇ ಬೇಡ!ಮುಕ್ತ ನ್ಯಾಯಸಮ್ಮತ ಚುನಾವಣೆ ನಮ್ಮ ಆಗ್ರಹ!ಆಗಸ್ಟ್...
ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ತಮಗೆ ನ್ಯಾಯಬದ್ಧವಾಗಿ ಸಿಗಬೇಕಾಗಿರುವ ಗೌರವಧನ, ಮತ್ತಿತರ ಸೌಲಭ್ಯಗಳಿಗಾಗಿ ಆಗ್ರಹಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರು...
ಸೌಜನ್ಯ ಹಾಗೂ ಅನನ್ಯ ಭಟ್ ಸೇರಿದಂತೆ ಎಲ್ಲರಿಗೂ ನ್ಯಾಯ ಒದಗಿಸಲು ನಿಷ್ಪಕ್ಷಪಾತ ತನಿಖೆಗೆ AIDSO ಆಗ್ರಹ! ಇಡೀ ದೇಶದ ಜನತೆ ಬೆಚ್ಚಿ ಬೀಳುವಂತಹ ಹಲವು ಕೊಲೆ ಹಾಗೂ ಅತ್ಯಾಚಾರದ ಪ್ರಕರಣಗಳು...
2025 ಜೂನ್ 1 ರಿಂದ 13: ಜಿನೀವಾ, ಸ್ವಿಜರ್‌ಲ್ಯಾಂಡ್: ಐಎಲ್‌ಓ ಸಮ್ಮೇಳನದಲ್ಲಿ ಎಐಯುಟಿಯುಸಿ ಪ್ಲಾಟ್‌ಫಾರ್ಮ್ ಆರ್ಥಿಕತೆಯಲ್ಲಿ ನ್ಯಾಯಬದ್ಧ ಕೆಲಸದ ಕುರಿತಾದ ಒಡಂಬಡಿಕೆ ಅಂಗೀಕಾರ! ಅಂತರರಾಷ್ಟ್ರೀಯ...
2025, ಆಗಸ್ಟ್ 12 ರಿಂದ 14ರ ವರೆಗೆ 3 ದಿನ ಆಶಾಗಳ ರಾಜ್ಯವ್ಯಾಪಿ ಅಹೋರಾತ್ರಿ ಧರಣಿ : ರೂ. 10,000 ಮಾಸಿಕ ಗೌರವಧನ ನಿಗದಿ ಮಾಡುವುದಾಗಿ ಕೊಟ್ಟ ಮಾತು ಉಳಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಒತ್ತಾಯ...
ಬೌದ್ಧಿಕ-ಸಂಘಟನಾತ್ಮಕ ಸದೃಢತೆ ಪ್ರೇರೇಪಿಸಿದ ರಾಜ್ಯಮಟ್ಟದ ಮಹಿಳಾ ಶಿಬಿರ ಜ್ಞಾನ ಪ್ರಪಂಚಕ್ಕೆ ಮಹಿಳೆಯರು ಪ್ರವೇಶ ಮಾಡಬೇಕು – ಕಾಮ್ರೇಡ್ ಕೆ. ರಾಧಾಕೃಷ್ಣ ರಾಜ್ಯದ 20 ಜಿಲ್ಲೆಗಳಿಂದ ಎಲ್ಲಾ ಸ್ತರದ...
ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿವೆ ಎನ್ನಲಾದ ನೂರಾರು ಅಸಹಜ ಸಾವುಗಳ ಕುರಿತು ನಿಷ್ಪಕ್ಷಪಾತ ತನಿಖೆಯಾಗಲಿ – ಎಸ್‌ಯುಸಿಐ(ಸಿ) ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವೊಂದರ...
ಸಾರ್ವಜನಿಕ ಶಿಕ್ಷಣ ಉಳಿಸಿ! ರಾಜ್ಯದ ಜನತೆಯ ಒಕ್ಕೊರಲ ಆಗ್ರಹ!! ಬಡ ರೈತ – ಕಾರ್ಮಿಕರ, ದುಡಿಯುವ ವರ್ಗದ ಮಕ್ಕಳಿಗೆ ಆಶಾಕಿರಣವೇ ಸರ್ಕಾರಿ ಶಾಲೆಗಳು! ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಕೋಟ್ಯಂತರ...
ಸಂಡೂರು ಅಕ್ರಮ ಗಣಿಗಾರಿಕೆ ಕೆಂಪು ನಾಡಿನ ಕರಾಳ ಕಥನ! ಬಳ್ಳಾರಿ ಜಿಲ್ಲೆಯಲ್ಲಿ ಪ್ರಮುಖವಾಗಿ ಸಂಡೂರು ಮತ್ತು ಹೊಸಪೇಟೆ ತಾಲೂಕುಗಳಲ್ಲಿ ಕಬ್ಬಿಣ ಅದಿರಿನ ನಿಕ್ಷೇಪಗಳು ಇವೆ. ಸಂಡೂರು ತಾಲ್ಲೂಕಿನಲ್ಲಿ...
ಐಪಿಎಲ್ ಕ್ರಿಕೆಟ್: ಬೆಟ್ಟಿಂಗ್‌ನ ದಾವಾಗ್ನಿಯಲ್ಲಿ ಬೇಯುತ್ತಿದೆ! 2008ರಲ್ಲಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಜನರ ಕಣ್ಣು ಕೋರೈಸಿತು. ಈಗಂತೂ ಇದು ಜಾಗತಿಕ...
ಇಸ್ರೇಲ್-ಇರಾನ್ ಕದನ ವಿರಾಮ ಘೋಷಿಸಲು ಯುದ್ಧ-ವಿರೋಧಿ ಪ್ರತಿಭಟನೆಗಳಿಂದ ಒತ್ತಡಕ್ಕೊಳಗಾದ ಟ್ರಂಪ್ – ಎಸ್‌ಯುಸಿಐ(ಕಮ್ಯುನಿಸ್ಟ್) ಎಸ್‌ಯುಸಿಐ(ಸಿ) ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರವಾಶ್...
ಅಮೆರಿಕಾ: ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಶಿಕ್ಷಣ, ಸಂಶೋಧನೆ, ಆರೋಗ್ಯ ಸೇವೆ ಮತ್ತು ಕಲೆ ನಿರ್ನಾಮ! ಎರಡನೇ ಬಾರಿ ಅಮೆರಿಕಾದಲ್ಲಿ ಅಧಿಕಾರಕ್ಕೆ ಬಂದ ಟ್ರಂಪ್ ಸರ್ಕಾರ, ಮಧ್ಯರಾತ್ರಿಯ...
ಹಿಟ್ಲರನ ಫ್ಯಾಷಿವಾದವನ್ನು ಹತ್ತಿಕ್ಕಿದ ವಿಜಯಕ್ಕೆ 80 ವರ್ಷ ಭಾಗ 11945ರ ಮೇ 2ರಂದು ಸೋವಿಯತ್ ಒಕ್ಕೂಟದ ಕೆಂಪು ಸೈನ್ಯವು ರಾಜಧಾನಿ ಬರ್ಲಿನ್ ತಲುಪಿ, ಜರ್ಮನಿಯನ್ನು ನಾಜಿ ಆಳ್ವಿಕೆಯಿಂದ...
ಭಾರತದ ಆರೋಗ್ಯ ವ್ಯವಸ್ಥೆಯನ್ನು ಅಸ್ವಸ್ಥಗೊಳಿಸುತ್ತಿರುವ ನಕಲಿ ಔಷಧಿಗಳ ಹಾವಳಿ; ಗಗನಕ್ಕೇರುತ್ತಿರುವ ಔಷಧದ ಬೆಲೆ! ಭಾರತವೀಗ ಕಲಬೆರಕೆ ಹಾಗೂ ಕಳಪೆ ದರ್ಜೆಯ ಔಷಧಿಗಳ ಜಾಗತಿಕ ಮಾರುಕಟ್ಟೆಯಲ್ಲಿ...
ಜುಲೈ 9ರ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸಿ! ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಸಂಘಟಿತ ಹೋರಾಟ ನಡೆಸಲು ಜನತೆಗೆ ಎಸ್ ಯುಸಿಐ (ಕಮ್ಯುನಿಸ್ಟ್) ಪಕ್ಷದ ಮನವಿ ಹತ್ತು ಕೇಂದ್ರ...
ನೂತನ ವಲಸೆ ಮತ್ತು ವಿದೇಶಿಯರ ಮಸೂದೆ 2025: ಸಿಎಎಯ ಕರಾಳ ನೆರಳು “ಭಾರತವು ಧರ್ಮಶಾಲೆ ಅಲ್ಲ. ಸೆಕ್ಷನ್ 3ರ ಅಡಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗುವ ಯಾರಿಗಾದರೂ ಪ್ರವೇಶ ನಿರಾಕರಿಸುವ...
ನ್ಯಾಯಮೂರ್ತಿ ಮನೆಯಲ್ಲಿ ಸುಟ್ಟ ನೋಟುಗಳು ಪತ್ತೆ : ಹಲವು ಸಂದೇಹ ಮಾರ್ಚ್ 14ರಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮನೆಯ ಆವರಣದ ಕೊಠಡಿಯೊಂದರಲ್ಲಿ ಅಗ್ನಿ ಆಕಸ್ಮಿಕ...