ಸುದ್ದಿ

ಬಿಡದಿ ಟೌನ್‌ಶಿಪ್ ಯೋಜನೆ - ರೈತ ಹೋರಾಟಕ್ಕೆ ಎಐಕೆಕೆಎಂಎಸ್ ಬೆಂಬಲ

ಜೂನ್ 13ರಂದು ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆಗಾಗಿ 516 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರವು ಹೊರಡಿಸಿದೆ. ಟೌನ್‌ಶಿಪ್ ಯೋಜನೆಗೆ ಬಿಡದಿ ವ್ಯಾಪ್ತಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ಅಡಿಯಲ್ಲಿ ಬರುವ 22 ಹಳ್ಳಿಗಳ 9,640 ಎಕರೆಗೂ ಹೆಚ್ಚು ಭೂಮಿಯ ಪೈಕಿ ಮೊದಲ ಹಂತದ ಭಾಗವಾಗಿ ರಾಮನಗರ ಜಿಲ್ಲೆಯ ಬಿಡದಿ ಸಮೀಪದ 516 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಒಂದು ರೈತ ವಿರೋಧಿ ಹುನ್ನಾರವನ್ನು ನಡೆಸಿದೆ.

ರಾಜ್ಯ ಮಟ್ಟದ ಮಹಿಳಾ ಶಿಬಿರ

ಮಹಿಳೆಯರನ್ನು ವೈಚಾರಿಕವಾಗಿ ಮತ್ತು ಸಂಘಟನಾತ್ಮಕವಾಗಿ ಸಜ್ಜುಗೊಳಿಸಲು, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್)ಯ ರಾಜ್ಯ ಸಮಿತಿಯ ನೇತೃತ್ವದಲ್ಲಿ 2026ರ ಜೂನ್ 27, 28,29 ರಂದು ರಾಜ್ಯ ಮಟ್ಟದ ಮಹಿಳಾ ಸಂಘಟನಾಕಾರರ ಅಧ್ಯಯನ ಶಿಬಿರವನ್ನು ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಸಂಘಟಿಸಲಾಗಿತ್ತು. ಚಿತ್ರದಲ್ಲಿ: ಎಸ್‌ಯುಸಿಐ(ಸಿ) ಪಕ್ಷದ ಪಾಲಿಟ್‌ಬ್ಯೂರೋ ಸದಸ್ಯರಾದ ಕಾ|| ಕೆ. ರಾಧಾಕೃಷ್ಣರವರು ಚರ್ಚೆ ನಡೆಸಿಕೊಟ್ಟರು. ವೇದಿಕೆಯಲ್ಲಿ ಎಡದಿಂದ: ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ಕಾ|| ಎಸ್. ಶೋಭಾ, ಅಖಿಲ ಭಾರತ ಉಪಾಧ್ಯಕ್ಷರಾದ ಕಾ|| ಬಿ.ಆರ್. ಅಪರ್ಣಾ, ಎಸ್‌ಯುಸಿಐ (ಸಿ) ರಾಜ್ಯ ಕಾರ್ಯದರ್ಶಿ ಕಾ|| ಕೆ. ಉಮಾ, ಎಐಎಂಎಸ್‌ಎಸ್ ರಾಜ್ಯಾಧ್ಯಕ್ಷರಾದ ಕಾ|| ಎಂ. ಎನ್. ಮಂಜುಳಾ

ಜನಹೋರಾಟಕ್ಕೆ ಸಂದ ಜಯ! ಪಿಂಚಣಿ ಪಡೆಯಲು ಆದಾಯ ಮಿತಿ ಏರಿಕೆ ಮಾಡಿ ರಾಜ್ಯ ಸರ್ಕಾರದ ಆದೇಶ

ರಾಜ್ಯದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನರ ವೇತನ, ಅವಿವಾಹಿತ ಮಹಿಳೆಯರ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ವೇತನಗಳನ್ನು ಪಡೆಯಲು ಆದಾಯ ಮಿತಿಯನ್ನು ರೂ 32 ಸಾವಿರದಿಂದ ರೂ. 1,20,000ಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕೊಲ್ಕತ್ತಾ - ‌‌ಕಾಮ್ರೇಡ್ ಶಿವದಾಸ್ ಘೋಷ್ ಅವರ 50ನೇ ವರ್ಷದ ಸ್ಮರಣ ಸಭೆ

ಆಗಸ್ಟ್ 5- ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರೂ, ಅಪ್ರತಿಮ ಮಾರ್ಕ್ಸ್‌ವಾದಿ ಚಿಂತಕರೂ ಮತ್ತು ಕಾರ್ಮಿಕ ವರ್ಗದ ಮಹಾನ್ ನಾಯಕರಾದ ಕಾಮ್ರೇಡ್ ಶಿವದಾಸ್ ಘೋಷ್ ಅವರ ಸ್ಮರಣ ದಿನ. 2026ಕ್ಕೆ ಅವರು ಕೊನೆಯುಸಿರೆಳೆದು 50 ವರ್ಷಗಳು. 

ಈ ಸಂದರ್ಭದಲ್ಲಿ ಕೊಲ್ಕತ್ತಾದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆ. ಸುರಿಯುವ ಮಳೆಯನ್ನು ಲೆಕ್ಕಿಸದೆ ಭಾಗವಹಿಸಿದ ಸಹಸ್ರಾರು ಜನತೆ. ಈ ಸಭೆಯನ್ನು ಉದ್ದೇಶಿಸಿ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರವಾಶ್ ಘೋಷ್ ಅವರು ಮಾತನಾಡಿದರು.

ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದೇವೆ.

ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದ ವಿರುದ್ಧ ಎಸ್‌ಯುಸಿಐ(ಸಿ) ಸಂಘಟಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆ

ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ಒಂದರ ಮೇಲೊಂದರಂತೆ ಜಾರಿಗೆ ತರುತ್ತಿರುವ ಜನವಿರೋಧಿ ನೀತಿಗಳ ವಿರುದ್ಧ, ಬೀದಿಬದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ 11.06.2026ರಂದು ಕೊಲ್ಕತ್ತಾದಲ್ಲಿ ಎಸ್‌ಯುಸಿಐ(ಸಿ) ಸಂಘಟಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಮಾವೇಶದ ಚಿತ್ರಗಳು

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸಿಎನ್‌ಜಿ ಮೊದಲಾದ ಇಂಧನ ದರಗಳ ತೀವ್ರ ಏರಿಕೆಯ ವಿರುದ್ಧ ಎಸ್‌ಯುಸಿಐ(ಸಿ) ಪ್ರತಿಭಟನೆ.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸಿಎನ್‌ಜಿ ಮೊದಲಾದ ಇಂಧನ ದರಗಳ ತೀವ್ರ ಏರಿಕೆಯನ್ನು ಖಂಡಿಸಿ, ಇವುಗಳ ಬೆಲೆ ನಿಯಂತ್ರಣಕ್ಕೆ, ತೆರಿಗೆ ಇಳಿಕೆಗೆ ಒತ್ತಾಯಿಸಿ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಸಂಘಟಿಸಲಾಯಿತು.

ಆಹಾರದ ಕಿಟ್ ವಿಳಂಬ: ಆದಿವಾಸಿಗಳ ಪ್ರತಿಭಟನೆ

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ, ಸರಗೂರು, ನಂಜನಗೂಡು, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕುಗಳ ಆದಿವಾಸಿ ಜನರಿಗೆ ಐಟಿಡಿಪಿ (ITDP) ಮೂಲಕ ವಿತರಿಸಲಾಗುವ ವಿಶೇಷ ಪೌಷ್ಟಿಕ ಆಹಾರ ಸಾಮಗ್ರಿಗಳ ಕಿಟ್ ವಿತರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ, ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ (AIJASC) ನೇತೃತ್ವದಲ್ಲಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜೂನ್ 16ರಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಎಪ್‌ಸ್ಟೀನ್ ಫೈಲ್ಸ್ - ಕೊಳೆತ ಬಂಡವಾಳವಾದದ ಪಾತಕ ಬಟಾಬಯಲು!

ಎಪ್‌ಸ್ಟೀನ್ ಫೈಲ್ಸ್ – ಕೊಳೆತ ಬಂಡವಾಳವಾದದ ಪಾತಕ ಬಟಾಬಯಲು! ಬಂಡವಾಳವಾದವು ತನ್ನ ಸಾವಿನಂಚಿನಲ್ಲಿದೆ. ಬಿಕ್ಕಟ್ಟು ಹೆಚ್ಚಾಗುತ್ತಿದ್ದಂತೆ ಅದು ಹೆಚ್ಚು ಹೆಚ್ಚು ಪ್ರತಿಗಾಮಿ ಹಾಗೂ ಅತ್ಯಂತ...

ಅಮೆರಿಕ-ಇಸ್ರೇಲ್‌ನಿಂದ ಇರಾನ್ ಮೇಲೆ ಯುದ್ಧ: ಅಮಾಯಕರ ಕಗ್ಗೊಲೆ

ಅಮೆರಿಕ-ಇಸ್ರೇಲ್‌ನಿಂದ ಇರಾನ್ ಮೇಲೆ ಯುದ್ಧ: ಅಮಾಯಕರ ಕಗ್ಗೊಲೆ ಇತ್ತೀಚೆಗೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಬೃಹತ್ ಮಿಲಿಟರಿ ದಾಳಿಯು ವಿಶ್ವಶಾಂತಿಗೆ ಗಂಭೀರ...

ಸರ್ಕಾರಿ ಶಾಲೆಗಳ ಧ್ವಂಸಕ್ಕಾಗಿ ಕೆ.ಪಿ.ಎಸ್ ಮ್ಯಾಗ್ನೆಟ್ ಯೋಜನೆ!

ಸರ್ಕಾರಿ ಶಾಲೆಗಳ ಧ್ವಂಸಕ್ಕಾಗಿ ಕೆ.ಪಿ.ಎಸ್ ಮ್ಯಾಗ್ನೆಟ್ ಯೋಜನೆ! ಏನಿದು ಕೆ.ಪಿ.ಎಸ್ ಮ್ಯಾಗ್ನೆಟ್ ಯೋಜನೆ?ಹೆಸರು ಹೊಸದಿರಬಹುದು, ಆದರೆ ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಸರ್ಕಾರಿ...

ಡಿ.16 ರಂದು ಕೊಲ್ಕತ್ತಾದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಗಣ್ಯರು ಹಾಗೂ ಜನಸ್ತೋಮ

ಡಿ.16 ರಂದು ಕೊಲ್ಕತ್ತಾದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಗಣ್ಯರು ಹಾಗೂ ಜನಸ್ತೋಮ ಪಶ್ಚಿಮ ಬಂಗಾಳ : ಮಹಿಳೆಯ ಘನತೆ ಮತ್ತು ಗೌರವದ ರಕ್ಷಣೆಗಾಗಿ ‘ಪ್ರತಿಜ್ಞಾ ರ‍್ಯಾಲಿ’ ಮಹಿಳಾ...

ವಿಕೃತಿಯ ಪರಾಕಾಷ್ಠೆಯನ್ನು ತಲುಪಿರುವ ಮಹಿಳೆಯರ ಮೇಲಿನ ಘೋರ ಪಾತಕಗಳು: ಕಡಿವಾಣಕ್ಕೆ ಬೇಕು ಪ್ರಬಲ ಜನಾಂದೋಲನ!

ವಿಕೃತಿಯ ಪರಾಕಾಷ್ಠೆಯನ್ನು ತಲುಪಿರುವ ಮಹಿಳೆಯರ ಮೇಲಿನ ಘೋರ ಪಾತಕಗಳು: ಕಡಿವಾಣಕ್ಕೆ ಬೇಕು ಪ್ರಬಲ ಜನಾಂದೋಲನ! ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ದಿನದಿಂದ ದಿನಕ್ಕೆ...

ಸಂಡೂರು: ಎಐಯುಟಿಯುಸಿ ನೇತೃತ್ವದಲ್ಲಿ ಗಣಿ ಕಾರ್ಮಿಕರ ಧೀರೋದಾತ್ತ ಹೋರಾಟಕ್ಕೆ ಸಂದ ಜಯ

ಸಂಡೂರು: ಎಐಯುಟಿಯುಸಿ ನೇತೃತ್ವದಲ್ಲಿ ಗಣಿ ಕಾರ್ಮಿಕರ ಧೀರೋದಾತ್ತ ಹೋರಾಟಕ್ಕೆ ಸಂದ ಜಯ ಎನ್.ಎಂ.ಡಿ.ಸಿ (National Mining Development Corporation) ಕೇಂದ್ರ ಸರ್ಕಾರದ ಗಣಿಗಾರಿಕೆ...

ಸರ್ಕಾರಗಳ ಕೈಯಲ್ಲಿ ಪಗಡೆಕಾಯಿಗಳಾದ ನಿರುದ್ಯೋಗಿ ಯುವಜನತೆ !

ಸರ್ಕಾರಗಳ ಕೈಯಲ್ಲಿ ಪಗಡೆಕಾಯಿಗಳಾದ ನಿರುದ್ಯೋಗಿ ಯುವಜನತೆ ! ದೇಶದಲ್ಲಿ ದುಡಿಯಲು ಸಮರ್ಥವಾಗಿರುವ 15 ರಿಂದ 35 ವಯೋಮಾನದವರು ಸುಮಾರು 50 ಕೋಟಿ ಇದ್ದಾರೆ. ಪ್ರತಿವರ್ಷವೂ 1.2 ಕೋಟಿ ಮಂದಿ ಈ...

ಸಾಮ್ರಾಜ್ಯಶಾಹಿ ಚೀನಾದಲ್ಲಿ ಅಧೋಗತಿಗಿಳಿದ ಕಾರ್ಮಿಕ ವರ್ಗದ ಪರಿಸ್ಥಿತಿ

ಸಾಮ್ರಾಜ್ಯಶಾಹಿ ಚೀನಾದಲ್ಲಿ ಅಧೋಗತಿಗಿಳಿದ ಕಾರ್ಮಿಕ ವರ್ಗದ ಪರಿಸ್ಥಿತಿ ರಸ್ತೆಗಳು ಒಂದೆಡೆ ಸೇರುವ ಸ್ಥಳದಲ್ಲಿ ರಾತ್ರಿ ವೇಳೆ ತೆರೆದಿರುವ ಉಪಾಹಾರಗೃಹಗಳ ಬಳಿ ಫ್ಲೂರೊಸೆಂಟ್ ಬೆಳಕಿನ ದೀಪದ ಬಳಿ...

ಮದ್ದೂರು ಹಿಂಸಾಚಾರ: ಎಸ್‌ಯುಸಿಐ(ಸಿ) ಖಂಡನೆ

ಮದ್ದೂರು ಹಿಂಸಾಚಾರ: ಎಸ್‌ಯುಸಿಐ(ಸಿ) ಖಂಡನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಇತ್ತೀಚೆಗೆ ನಡೆದ ಕಲ್ಲು ತೂರಾಟ ಮತ್ತು ಹಿಂಸಾಚಾರದ ಬಗ್ಗೆ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ...

ವಿಷಯ: ವಿದ್ಯುತ್ ವಲಯದ ಖಾಸಗೀಕರಣ ಹಾಗೂ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ನಿಲ್ಲಿಸಿ - ವಿದ್ಯುತ್ ತಜ್ಞರ, ಗಣ್ಯರ ಹಾಗೂ ಗ್ರಾಹಕರ ಆಗ್ರಹ

ವಿಷಯ: ವಿದ್ಯುತ್ ವಲಯದ ಖಾಸಗೀಕರಣ ಹಾಗೂ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ನಿಲ್ಲಿಸಿ – ವಿದ್ಯುತ್ ತಜ್ಞರ, ಗಣ್ಯರ ಹಾಗೂ ಗ್ರಾಹಕರ ಆಗ್ರಹ ಆಲ್ ಇಂಡಿಯಾ ಎಲೆಕ್ಟ್ರಿಸಿಟಿ ಕನ್ಸೂಮರ್ ಅಸೋಸಿಯೇಶನ್...

ಮೈಸೂರು ಜಿಲ್ಲೆಯ ಸರಗೂರು, ಎಚ್.ಡಿ.ಕೋಟೆ ತಾಲೂಕುಗಳಲ್ಲಿ ಕಳೆದ 20 ದಿನಗಳಲ್ಲಿ ಹುಲಿ ದಾಳಿಗೆ 4 ಮಂದಿ ಬಲಿಯಾಗಿದ್ದಾರೆ.

ಮೈಸೂರು ಜಿಲ್ಲೆಯ ಸರಗೂರು, ಎಚ್.ಡಿ.ಕೋಟೆ ತಾಲೂಕುಗಳಲ್ಲಿ ಕಳೆದ 20 ದಿನಗಳಲ್ಲಿ ಹುಲಿ ದಾಳಿಗೆ 4 ಮಂದಿ ಬಲಿಯಾಗಿದ್ದಾರೆ. ಮೈಸೂರು ಜಿಲ್ಲೆಯ ಸರಗೂರು, ಎಚ್.ಡಿ.ಕೋಟೆ ತಾಲೂಕುಗಳಲ್ಲಿ ಕಳೆದ 20...

ಕೆಂಪು ಕೋಟೆ ಬಳಿಯ ಸ್ಫೋಟದಲ್ಲಿ ಅಮಾಯಕ ನಾಗರಿಕರ ಸಾವಿಗೆ SUCI(C) ತೀವ್ರ ಆಘಾತ

ಕೆಂಪು ಕೋಟೆ ಬಳಿಯ ಸ್ಫೋಟದಲ್ಲಿ ಅಮಾಯಕ ನಾಗರಿಕರ ಸಾವಿಗೆ SUCI(C) ತೀವ್ರ ಆಘಾತ ಪತ್ರಿಕಾ ಹೇಳಿಕೆ ಕೆಂಪು ಕೋಟೆ ಬಳಿಯ ಸ್ಫೋಟದಲ್ಲಿ ಅಮಾಯಕ ನಾಗರಿಕರ ಸಾವಿಗೆ SUCI(C) ತೀವ್ರ ಆಘಾತ SUCI...

ಜನಪರ ನೀತಿಗಳ ಜಾರಿಗೆ ಆಗ್ರಹಿಸಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ

ಜನಪರ ನೀತಿಗಳ ಜಾರಿಗೆ ಆಗ್ರಹಿಸಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಕಾ.ಕೆ.ರಾಧಾಕೃಷ್ಣ ಜನಪರ ನೀತಿಗಳ ಜಾರಿಗೆ ಆಗ್ರಹಿಸಿ ರಾಜ್ಯ ಮಟ್ಟದ ಬೃಹತ್...

ಸಾರ್ವಜನಿಕ ಶಿಕ್ಷಣವನ್ನು ಉಳಿಸಿ!

ಸಾರ್ವಜನಿಕ ಶಿಕ್ಷಣವನ್ನು ಉಳಿಸಿ! ದಾವಣಗೆರೆಯ ಕಾರಿಗನೂರು ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಸೌಕರ್ಯವನ್ನು ಖಾತ್ರಿಪಡಿಸಲು AIDSO ದಾವಣಗೆರೆ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ...

ದುಡಿಯುವ ಅವಧಿ 10 ಗಂಟೆಗೆ ಏರಿಕೆಯ ಪ್ರಸ್ತಾಪ - ಎಸ್‌ಯುಸಿಐ(ಸಿ) ಖಂಡನೆ

ದುಡಿಯುವ ಅವಧಿ 10 ಗಂಟೆಗೆ ಏರಿಕೆಯ ಪ್ರಸ್ತಾಪ – ಎಸ್‌ಯುಸಿಐ(ಸಿ) ಖಂಡನೆ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆಗೆ ತಿದ್ದುಪಡಿ ತಂದು, ಕೆಲಸದ ಅವಧಿಯನ್ನು 9 ರಿಂದ 10 ಗಂಟೆಗೆ ಹಾಗೂ...

ಭೂಸ್ವಾಧೀನ ವಿರೋಧಿ ಹೋರಾಟಗಾರರ ಬಂಧನಕ್ಕೆ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಖಂಡನೆ

ಭೂಸ್ವಾಧೀನ ವಿರೋಧಿ ಹೋರಾಟಗಾರರ ಬಂಧನಕ್ಕೆ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಖಂಡನೆ ಪತ್ರಿಕಾ ಹೇಳಿಕೆ ಬೆಂಗಳೂರಿನ ದೇವನಹಳ್ಳಿಯಲ್ಲಿ ಭೂಸ್ವಾಧೀನ ವಿರೋಧಿಸಿ ಕಳೆದ 1,180 ದಿನಗಳಿಂದ ಶಾಂತಿಯುತವಾಗಿ...